ತ್ರಿಶೂರ್:ತ್ರಿಶೂರ್‌ನ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲಿನ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ 120 ಕೆ.ಜಿಯಷ್ಟು ಅಕ್ರಮ ಚಿನ್ನವನ್ನು ಕೇರಳದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತ್ರಿಶೂರ್:ತ್ರಿಶೂರ್‌ನ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲಿನ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ 120 ಕೆ.ಜಿಯಷ್ಟು ಅಕ್ರಮ ಚಿನ್ನವನ್ನು ಕೇರಳದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಈವರೆಗೆ ವಶಪಡಿಸಿಕೊಂಡಿರುವ ಅತ್ಯಧಿಕ ಪ್ರಮಾಣದ ಚಿನ್ನ ಇದಾಗಿದೆ.
ಆಭರಣಗಳ ತಯಾರಿಕಾ ಘಟಕಗಳು ಮತ್ತು ಆಭರಣದ ಅಂಗಡಿಗಳ ಮೇಲೂ ದಾಳಿ ನಡೆದಿದೆ.
ಬಿಲ್ ಮತ್ತು ತೆರಿಗೆ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಎಸ್‌ಟಿ ವಿಶೇಷ ಕಮಿಷನರ್ ಅಬ್ರಹಾಂ ಅವರ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗುತ್ತಿದೆ. ಗೌಪ್ಯತೆಯ ದೃಷ್ಟಿಯಿಂದ ತರಬೇತಿ ಕಾರ್ಯಕ್ರಮದ ನೆಪದಲ್ಲಿ ರಾಜ್ಯದಾದ್ಯಂತದ ಅಧಿಕಾರಿಗಳನ್ನು ತ್ರಿಶೂರ್‌ಗೆ ಕರೆಸಿಕೊಂಡು ಬ್ಯಾನರ್‌ಗಳನ್ನು ಹಾಕಿದ ಬಸ್‌ಗಳಲ್ಲಿ ವಿವಿಧ ಸ್ಥಳಗಳಿಗೆ ಕಳುಹಿಸಿ ಶೋಧ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಾಚರಣೆ ಮುಂದುವರಿಯಲಿದೆ ಎಂದು ರಾಜ್ಯ ಜಿಎಸ್‌ಟಿ ಗುಪ್ತಚರ ಸಂಸ್ಥೆಯ ಉಪ ಆಯುಕ್ತ ದಿನೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.