ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಪರೋಕ್ಷವಾಗಿ ಕುಟುಕಿರುವ ಬಿಜೆಪಿ ನಾಯಕ ಗೌರವ್ ಗುಪ್ತಾ, 'ಈ ಅಕ್ರಮ ಸಂಪತ್ತಿನ ಕುರಿತು ಗಾಂಧಿ ಕುಟುಂಬ ವಿವರಣೆ ಕೊಡಬೇಕು' ಎಂದಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಪರೋಕ್ಷವಾಗಿ ಕುಟುಕಿರುವ ಬಿಜೆಪಿ ನಾಯಕ ಗೌರವ್ ಗುಪ್ತಾ, 'ಈ ಅಕ್ರಮ ಸಂಪತ್ತಿನ ಕುರಿತು ಗಾಂಧಿ ಕುಟುಂಬ ವಿವರಣೆ ಕೊಡಬೇಕು' ಎಂದಿದ್ದಾರೆ.
ಕೇರಳದ ವಯನಾಡ್ ಲೋಕಸಭಾ ಉಪಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ಗಾಂಧಿ ಅವರು, ₹11.99 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಪ್ರಿಯಾಂಕಾ ಅವರು ಕಳೆದ ಹಣಕಾಸು ವರ್ಷದಲ್ಲಿ ₹46.39 ಲಕ್ಷ ಆದಾಯ ಗಳಿಸಿದ್ದು, ಒಟ್ಟು ₹11.99 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಪತಿ ರಾಬರ್ಟ್ ವಾದ್ರಾ ಅವರ ಆದಾಯದಲ್ಲಿ ಕುಸಿತ ಕಂಡುಬಂದಿದ್ದು, 2019-20ನೇ ಹಣಕಾಸು ವರ್ಷದಲ್ಲಿ ಅವರ ಆದಾಯ ₹55.58 ಲಕ್ಷ ಇತ್ತು. ಆದರೆ, 2023-24ನೇ ಹಣಕಾಸು ವರ್ಷದಲ್ಲಿ ಆದಾಯವು ₹15.09 ಲಕ್ಷಕ್ಕೆ ಇಳಿದಿದೆ.