HEALTH TIPS

ಆನ್‍ಲೈನ್ ಟ್ರೇಡಿಂಗ್ ವಂಚನೆ-ಬರೋಬ್ಬರಿ 13ಲಕ್ಷಕ್ಕೂ ಹೆಚ್ಚು ಹಣಕಳೆದುಕೊಂಡ ಶಿಕ್ಷಕಿ!

ಕಾಸರಗೋಡು:ಆನ್‍ಲೈನ್ ಟ್ರೇಡಿಂಗ್ ವಂಚನೆಯಲ್ಲಿ ಅಧ್ಯಾಪಿಕೆಯೊಬ್ಬರು ಭರೋಬ್ಬರಿ 13ಲಕ್ಷಕ್ಕೂ ಹೆಚ್ಚಿನ ಮೊತ್ತ ಕಳೆದುಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯೊಂದರ ಶಿಕ್ಷಕಿ ಹಣಕಳೆದುಕೊಂಡವರು. ಈ ಬಗ್ಗೆ ಕಾಸರಗೋಡು ಸೈಬರ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆನ್‍ಲೈನ್ ಟ್ರೇಡಿಂಗ್ ಹೆಸರಿನ ಸಂಸ್ಥೆಯವರು ಶಿಕ್ಷಕಿಯನ್ನು ಸಂಪರ್ಕಿಸಿದ್ದು, ಅವರನ್ನು ವಿಶ್ವಾಸಕ್ಕೊಳಪಡಿಸಿದ ನಂತರ ಉತ್ತಮ ಬಡ್ಡಿದರ ಒದಗಿಸುವ ಭರವಸೆಯೊಂದಿಗೆ ಅವರಿಂದ ಹಣ ಠೇವಣಿಯಾಗಿ ತೆಗೆದುಕೊಂಡಿದ್ದರು. ಆರಂಭದಲ್ಲಿ ಸಣ್ಣ ಮೊತ್ತ ಪಡೆದ ನಂತರ ಮುಂದಿನ ಕೆಲವು ಕಂತುಗಳಲ್ಲಾಗಿ ಒಟ್ಟು 1337950ರೂ. ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries