ಮಲಪ್ಪುರಂ: ಮಲಪ್ಪುರಂ ಚೇಲಾರಿಯಲ್ಲಿ 13 ವರ್ಷದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೇಳಾರಿ ಮೂಲದ ಮಹಮ್ಮದ್ ನಿಹಾಲ್ (13) ಮೃತ ಬಾಲಕ.
ಪೋಲೀಸರ ಎಫ್.ಐ.ಆರ್. ವರದಿ ಪ್ರಕಾರ, ಪೋನ್ ಅತಿಯಾಗಿ ಬಳಸಿದ್ದಕ್ಕಾಗಿ ಪೋಷಕರು ಬೈದ ಕೋಪದಲ್ಲಿ ಹುಡುಗ ಆತ್ಮಹತ್ಯೆಗೈದಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮಗು ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಬಿಡುಗಡೆ ಮಾಡಲಾಗುವುದು.