ವಯನಾಡು :ಕೇರಳದ ಮಾತಾ ಅಮೃತಾನಂದಮಯಿ ಮಠವು ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ಹಾನಿಗೀಡಾದ ಪ್ರೆದೇಶದಲ್ಲಿನ ದುರಂತ ಪರಿಹಾರಕ್ಕಾಗಿ ₹15 ಕೋಟಿ ವೆಚ್ಚದಲ್ಲಿ 'ಅಮೃತ ಭೂಕುಸಿತ ಮುನ್ನೆಚ್ಚರಿಕೆ ವ್ಯವಸ್ಥೆ' ರೂಪಿಸಿದೆ.
ವಯನಾಡು :ಕೇರಳದ ಮಾತಾ ಅಮೃತಾನಂದಮಯಿ ಮಠವು ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ಹಾನಿಗೀಡಾದ ಪ್ರೆದೇಶದಲ್ಲಿನ ದುರಂತ ಪರಿಹಾರಕ್ಕಾಗಿ ₹15 ಕೋಟಿ ವೆಚ್ಚದಲ್ಲಿ 'ಅಮೃತ ಭೂಕುಸಿತ ಮುನ್ನೆಚ್ಚರಿಕೆ ವ್ಯವಸ್ಥೆ' ರೂಪಿಸಿದೆ.
ಮಾತಾ ಅಮೃತಾನಂದಮಯಿ ದೇವಿ ಅವರ 71ನೇ ಜನ್ಮದಿನಾಚರಣೆ ಪ್ರಯುಕ್ತ ಈ ಯೋಜನೆಯನ್ನು ಅಮೃತ್ ವಿದ್ಯಾಪೀಠದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಠದ ಉಪಾಧ್ಯಕ್ಷ ಸ್ವಾಮಿ ಅಮೃತಸ್ವರೂಪಾನಂದ ಪುರಿ, 'ವಯನಾಡು ದುರಂತದಲ್ಲಿ ಬದುಕುಳಿದವರಿಗೆ ಪರಿಹಾರವು ತ್ವರಿತವಾಗಿ ದೊರಕಬೇಕು ಎಂದು ಅಮ್ಮ ಬಯಸುತ್ತಾರೆ. ಆದ್ದರಿಂದ ₹ 15 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಭೂ ಕುಸಿತದ ಬಗ್ಗೆ ಮುನ್ನೆಚ್ಚರಿಕೆ ಒದಗಿಸುವ ಈ ವ್ಯವಸ್ಥೆಗೆ ಸರ್ಕಾರದ ಅನುಮೋದನೆ ದೊರೆತ ಬಳಿಕ ಅನುಷ್ಠಾನ ಮಾಡಲಾಗುತ್ತದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.