ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಅವರ ಕೊಡುಗೆಗಳನ್ನು ಸ್ಮರಿಸಿ, ಗೌರವಿಸಲು 2024ರಿಂದ 2026ರವರೆಗೆ 2 ವರ್ಷ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಘೋಷಿಸಿದರು.

'ಪ್ರಪಂಚದ ಅತ್ಯಂತ ದೃಢವಾದ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದ ಹಿಂದಿನ ದೂರದೃಷ್ಟಿಯುಳ್ಳ ಚಿಂತಕ ಸರ್ದಾರ್ ಪಟೇಲ್ ಅವರ ಕೊಡುಗೆ ಮತ್ತು ಲಕ್ಷದ್ವೀಪದಿಂದ ಕಾಶ್ಮೀರದವರೆಗೆ ಭಾರತದ ಏಕೀಕರಣದಲ್ಲಿ ಅವರು ವಹಿಸಿದ ಪಾತ್ರ ಅಮರವಾಗಿದೆ' ಎಂದು ಅಮಿತ್ ಶಾ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.
1875ರ ಅಕ್ಟೋಬರ್ 31ರಂದು ಗುಜರಾತ್‌ನಲ್ಲಿ ಪಟೇಲ್ ಅವರು ಜನಿಸಿದರು. 2014ರಿಂದ ಕೇಂದ್ರ ಸರ್ಕಾರವು ಈ ದಿನವನ್ನು 'ರಾಷ್ಟ್ರೀಯ ಏಕತಾ ದಿನ'ವನ್ನಾಗಿ ಆಚರಿಸುತ್ತಿದೆ.
ಭಾರತದ ಮೊದಲ ಗೃಹ ಸಚಿವ ಹಾಗೂ ಉಪಪ್ರಧಾನಿಯಾಗಿ 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಿದ ಕೀರ್ತಿ ಪಟೇಲ್ ಅವರಿಗೆ ಸಲ್ಲುತ್ತದೆ.