HEALTH TIPS

ಸರ್ದಾರ್‌ ಪಟೇಲರ 150ನೇ ಜನ್ಮದಿನ: ಜನನ, ಮರಣ ನೋಂದಣಿಗೆ ಮೊಬೈಲ್‌ ಆಯಪ್‌ ಬಿಡುಗಡೆ

           ವದೆಹಲಿ: ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸುವ ಭಾಗವಾಗಿ ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದರು.


           ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ, ಭಾರತ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತಾಲಯದ ಆವರಣದಲ್ಲಿ ಪಟೇಲ್ ಅವರ ಪ್ರತಿಮೆ ಅನಾವರಣಗೊಳಿಸಿದ ಸಂದರ್ಭದಲ್ಲಿ ಆಯಪ್‌ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು.

'ನಾಗರಿಕ ನೋಂದಣಿ ವ್ಯವಸ್ಥೆ (CRS) ಮೊಬೈಲ್ ಆಯಪ್‌ ಅನ್ನು ಭಾರತ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತಾಲಯ ಅಭಿವೃದ್ಧಿಪಡಿಸಿದೆ. ಇದರಿಂದ ಜನನ ಹಾಗೂ ಮರಣ ನೋಂದಣಿಗೆ ಸದ್ಯ ತೆಗೆದುಕೊಳ್ಳುತ್ತಿರುವ ಸಮಯ ಕಡಿಮೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯಡಿ ಆಡಳಿತದಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ನೂತನ ಆಯಪ್‌ ಮೂಲಕ ನಾಗರಿಕರು ಜನನ ಹಾಗೂ ಮರಣ ನೋಂದಣಿಯನ್ನು ಎಲ್ಲಿಂದಲಾದರೂ, ಯಾವಾಗಲಾದರೂ ಮತ್ತು ಆಯಾ ರಾಜ್ಯಗಳ ಭಾಷೆಯಲ್ಲಿ ನೋಂದಾಯಿಸಬಹುದಾಗಿದೆ' ಎಂದರು.

         'ಏಕತೆಯ ಎಳೆಯ ಬಳಸಿ ಇಡೀ ದೇಶವನ್ನು ಒಗ್ಗೂಡಿಸಿ, ಬಲಿಷ್ಠ ಭಾರತವನ್ನು ಸರ್ದಾರ್ ಪಟೇಲರು ಕಟ್ಟಿದರು. ಉಕ್ಕಿನ ಮನುಷ್ಯನ ಪ್ರತಿಮೆಯು ದೇಶದ ಹಿತಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರ ಪ್ರತೀಕವಾಗಿದೆ. ಅವರ ಪ್ರತಿಮೆಯು ದೇಶದ ಪ್ರಜಾಪ್ರಭುತ್ವ ಸ್ಥಾಪನೆ ಮತ್ತು ಅವರ ಬದ್ಧತೆಗೆ ಸಾಕ್ಷಿಯಂತಿದೆ' ಎಂದಿದ್ದಾರೆ.

         'ಸರ್ದಾರ್ ಅವರ ಜನ್ಮದಿನ ಅ. 31ರಂದು. ಆದರೆ ಈ ಬಾರಿ ದೀಪಾವಳಿ ಹಿನ್ನೆಲೆಯಲ್ಲಿ ಎರಡು ದಿನ ಮುಂಚಿತವಾಗಿ 'ಏಕತೆಗಾಗಿ ಓಟ'ವನ್ನು ಆಯೋಜಿಸಲಾಗಿದೆ' ಎಂದು ಶಾ ತಿಳಿಸಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1875ರ ಅ. 31ರಂದು ಗುಜರಾತ್‌ನ ಜಾಡಿಯಾದ್‌ನಲ್ಲಿ ಜನಿಸಿದರು. ದೇಶದ ಮೊದಲ ಗೃಹ ಸಚಿವರಾದ ಪಟೇಲರ ಜನ್ಮದಿನವನ್ನು 2014ರಿಂದ 'ರಾಷ್ಟ್ರೀಯ ಏಕತಾ ದಿನ' ಎಂದು ಆಚರಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 550 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries