ಕುಂಬಳೆ: ಸಿಪಿಸಿಆರ್‍ಐ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಡುವ ಭರವಸೆಯೊಂದಿಗೆ ಮಹಿಳೆಯೊಬ್ಬರಿಂದ 15ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೆರ್ಲ ಸನಿಹದ ಬಲ್ತಕಲ್ಲು ನಿವಾಸಿ ಸಚಿತಾ ಎಂಬಾಕೆ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿದೂರು ಪದಕ್ಕಲ್ ಹೌಸ್‍ನ ನಿಶ್ಮಿತಾ ಶೆಟ್ಟಿ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಡಿವೈಎಫೈನ ಮಾಜಿ ನೇತಾರೆ, ಬಾಲಸಂಘ ಜಿಲ್ಲಾ ಸಮಿತಿ ನೇತಾರೆಯೂ ಆಗಿದ್ದ ಈಕೆ, ಬಾಡೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೆವೆ ಸಲ್ಲಿಸುತ್ತಿದ್ದಾಳೆ. ಸಿಪಿಸಿಆರ್‍ಐನಲ್ಲಿ ಉದ್ಯೋಗ ದೊರಕಿಸಿ ಕೊಡುವ ಭರವಸೆಯೊಂದಿಗೆ ನಿಶ್ಮಿತಾ ಶೆಟ್ಟಿ ಅವರಿಂದ 2013ರ ಮೇ 31ರಿಂದ ಆ. 25ರ ವರೆಗಿನ ಕಾಲಾವಧಿಯಲ್ಲಿ ವಿವಿಧ ಹಂತಗಳಲ್ಲಿ 15, 05, 796ರೂ. ಪಡೆದುಕೊಂಡಿದ್ದು, ಉದ್ಯೋಗವನ್ನೂ ನೀಡದೆ, ಪಡೆದ ಹಣ ವಾಪಾಸೂ ಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಣವನ್ನು ಬ್ಯಾಂಕ್ ಖಾತೆ ಹಾಗೂ ಗೂಗಲ್ ಪೇ ಮೂಲಕ ಸ್ವೀಕರಿಸಲಾಗಿದೆ.