HEALTH TIPS

ರಾಮ ಮಂದಿರ | 161 ಅಡಿ ಎತ್ತರದ ಗೋಪುರ ನಿರ್ಮಾಣ ಕಾರ್ಯ ಆರಂಭ

        ಯೋಧ್ಯೆ : ರಾಮ ಮಂದಿರದ 161 ಅಡಿ ಎತ್ತರದ ಗೋಪುರ ನಿರ್ಮಾಣವು ಗುರುವಾರ ಆರಂಭಗೊಂಡಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದರು.

        'ಗೋಪುರ ನಿರ್ಮಾಣದ ಜೊತೆಯಲ್ಲಿಯೇ ಸಪ್ತ ಖುಷಿಗಳ ದೇವಾಲಯ ನಿರ್ಮಾಣದ ಕಾರ್ಯವೂ ತ್ವರಿತಗತಿಯಲ್ಲಿ ಮುಂದುವರಿದಿದೆ.   ಇದು ಕೂಡ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ' ಎಂದರು.

            'ಮಂದಿರ ಸಂಕೀರ್ಣದಲ್ಲಿ ಬಾಕಿ ಉಳಿದಿರುವ ನಿರ್ಮಾಣ ಕಾರ್ಯಕ್ಕೆ ವೇಗ ತುಂಬಲು, ಮೂರು ದಿನಗಳ ಪರಿಶೀಲನಾ ಸಭೆಯು ಗುರುವಾರ ಆರಂಭಗೊಂಡಿದೆ. ನಿರ್ಮಾಣ ಕಾರ್ಮಿಕರ ಸಂಖ್ಯೆಯನ್ನು ಏರಿಸುವ ಸಂಬಂಧ ಹಾಗೂ ತಾಂತ್ರಿಕ ಸಿಬ್ಬಂದಿಯ ಅಗತ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು' ಎಂದು ಅವರು ತಿಳಿಸಿದರು.

              ಈ ವರ್ಷಾರಂಭದಲ್ಲಿ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries