ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ಪುನರ್ ವಿಂಗಡಣೆ ಅಂಗವಾಗಿ ರಾಜ್ಯದಲ್ಲಿ ಅರ್ಧದಷ್ಟು ವಾರ್ಡ್ ಗಳ ಡಿಜಿಟಲ್ ನಕ್ಷೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಡಿಲಿಮಿಟೇಶನ್ ಆಯೋಗ ಕರೆದಿದ್ದ ಸಭೆಯಲ್ಲಿ ಮಾಹಿತಿ ನೀಡಿದರು.
ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ವಾರ್ಡ್ ವಿಂಗಡಣೆಯ ಕರಡು ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ.
ಜಿಲ್ಲಾಧಿಕಾರಿಗಳು ನವೆಂಬರ್ 5 ರೊಳಗೆ ಡಿಲಿಮಿಟೇಶನ್ ಆಯೋಗಕ್ಕೆ ಕರಡು ವಾರ್ಡ್ ವಿಂಗಡಣೆಯ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ನ.16ರಂದು ಕರಡು ವಾರ್ಡ್ ವಿಂಗಡಣೆ ವರದಿಯನ್ನು ಆಯೋಗ ಪ್ರಕಟಿಸಲಿದೆ.
ಅಸ್ತಿತ್ವದಲ್ಲಿರುವ ವಾರ್ಡ್‍ಗಳು 2001 ರ ಜನಗಣತಿಯ ಜನಸಂಖ್ಯೆಯ ಪ್ರಕಾರ ಇತ್ತು. 2011 ರ ಜನಗಣತಿ ಜನಸಂಖ್ಯೆಯ ಆಧಾರದ ಮೇಲೆ ಈಗ ವಾರ್ಡ್ ಮರುವಿಂಗಡಣೆ ಮಾಡಲಾಗುತ್ತದೆ. 2024ರಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‍ಗಳ ಸಂಖ್ಯೆ ಪರಿಷ್ಕರಿಸಲಾಗಿರುವುದರಿಂದ ಜಿಲ್ಲೆಗಳ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‍ಗಳ ಪುನರ್‍ವಿಂಗಡಣೆ ಅಗತ್ಯವಾಗಿತ್ತು.
ಮೊದಲ ಹಂತದಲ್ಲಿ 941 ಗ್ರಾಮ ಪಂಚಾಯಿತಿಗಳಲ್ಲಿ 17337 ವಾರ್ಡ್‍ಗಳು, 87 ನಗರಸಭೆಗಳಲ್ಲಿ 3241 ವಾರ್ಡ್‍ಗಳು ಮತ್ತು ಆರು ಪಾಲಿಕೆಗಳ 421 ವಾರ್ಡ್‍ಗಳ ಮರುವಿಂಗಡಣೆ ಪ್ರಕ್ರಿಯೆ ನಡೆಯುತ್ತಿದೆ.