ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 17ನೇ ವಷರ್Àದ ಶಾರದೋತ್ಸವದ ಪ್ರಯುಕ್ತ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಶನಿವಾರ ಜರಗಿತು. ಬದಿಯಡ್ಕ ಶ್ರೀ ಗುರುಸದನದಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಚೆಂಡೆಮೇಳ, ಮುತ್ತುಕೊಡೆಗಳು, ಕುಣಿತ ಭಜನೆ ಗಮನಸೆಳೆಯಿತು. ಬದಿಯಡ್ಕ ಪೇಟೆಯಲ್ಲಾಗಿ ಸಾಗಿದ ಮೆರವಣಿಗೆಯು ಪೆರಡಾಲ ವರದಾ ನದಿಯಲ್ಲಿ ವಿಗ್ರಹವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.