ಮಂಜೇಶ್ವರ: ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ನೂತನ ರಾಜಗೋಪುರದ ಶಿಲಾನ್ಯಾಸ ಅ.18 ರಂದು ಶ್ರೀ ಕ್ಷೇತ್ರದ ತಂತ್ರಿವರ್ಯ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ಜರಗಲಿದೆ.
ಬೆಳಗ್ಗೆ 9 ಕ್ಕೆ ಗಿIಗಿIಜ ಒqಉಟ ಸ್ವಾಮೀಜಿಯವರನ್ನು, ತಂತ್ರಿವರ್ಯರನ್ನು, ಅತಿಥಿಗಳನ್ನು ಶ್ರೀ ಶಾಸ್ತಾವೇಶ್ವರ ದೇವಸ್ಥಾನದಿಂದ ಪೂರ್ಣ ಕುಂಭ ಸ್ವಾಗತಗಳೊಂದಿಗೆ ಬರಮಾಡಿಕೊಳ್ಳಲಾಗುವುದು. 9.30 ರ ಶುಭ ಲಗ್ನದಲ್ಲಿ ಪೂಜ್ಯ ತಂತ್ರಿಗಳು ಮತ್ತು ಪೂಜ್ಯ ಸ್ವಾಮೀಜಿಗಳವರ ಆಶೀರ್ವಾದದೊಂದಿಗೆ, ಗಣ್ಯರ ಉಪಸ್ಥಿತಿಯಲ್ಲಿ ನೂತನ ರಾಜಗೋಪುರದ ತಿರನ್ಯಾಸ ಕಾರ್ಯಕ್ರಮ ನಡೆಯಲಿದೆ. 10.ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ತಂತ್ರಿವರ್ಯರಿಂದ ಆಶೀರ್ವಚನ ಜರಗಲಿದೆ. ಉದ್ಯಮಿ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ ಉದ್ಘಾಟಿಸುವರು. ತಂತ್ರಿವರ್ಯ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ವಿವಿಧ ವಲಯಗಳ ಗಣ್ಯರಾದ ಕೃಷ್ಣ ಭಟ್ ಮಂಜೇಶ್ವರ, ರವೀಶ್ ಭಟ್ ಕೀರ್ತೇಶ್ವರ, ರಾಜ ಬೆಳ್ಳಪ್ಪಾಡ, ಬೆದ್ರಡ್ಕ ರಮೇಶ್ ಕಾರಂತ ಶುಭ ಹಾರೈಸುವರು. ಪ್ರಮುಖರಾದ ಸತೀಶ್ ಉಚ್ಚಿಲ, ಗೋಪಾಲ ಶೆಟ್ಟಿ ಅರಿಬೈಲು, ವಿಶ್ವಾಸ್ ದಾಸ್, ಶಶಿಕಲಾ ಸುವರ್ಣ, ತುಕಾರಾಮ ಕುಂಬಳೆ, ವಿಶ್ವನಾಥ ಪೊಯ್ಯಕಂಡ, ದಯಾನಂದ ಬಂಗೇರ, ಯಶವಂತ ವಿಟ್ಲ ಭಾಗವಹಿಸುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಕ್ಷೇತ್ರವು ಸುಮಾರು 1 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನೆರವೇರಲಿದೆ.