ಕಾಸರಗೋಡು : ಮ್ಯಾನ್ಯುಫ್ಯಾಕ್ಚರರ್ಸ್ ಅಸೋಸಿಯೇಶನ್ ಆಫ್ ಸೋಡಾ ಆ್ಯಂಡ್ ಸಾಫ್ಟ್ ಡ್ರಿಂಕ್ಸ್ ಕೇರಳ (ಎಂಎಎಸ್‍ಎಸ್) ಜಿಲ್ಲಾ ಸಮಾವೇಶ ಹಾಗೂ ಕುಟುಂಬ ಸಂಗಮವು ಅ.19ರಂದು ಬೆಳಗ್ಗೆ 10ಕ್ಕೆ ಪಳ್ಳಿಕ್ಕರ ರೆಡ್ ಮೂನ್ ಬೀಚ್ ನಲ್ಲಿ ನಡೆಯಲಿದೆ. ಕುಟುಂಬ ಸಂಗಮವನ್ನು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು ಎಂದು ಸಂಘಟನೆ ರಾಜ್ಯಾಧ್ಯಕ್ಷ ಎ.ವಿ.ಶಶಿಧರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಘಟನೆ ಕಾಸರಗೋಡು ಜಿಲ್ಲಾಧ್ಯಕ್ಷ ಟಿ.ನಾರಾಯಣನ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಸ್ವಾಗತಿಸುವರು. ಪಳ್ಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಧಾನ ವ್ಯವಸ್ಥಾಪಕ ಸಜಿತ್ ಕುಮಾರ್, ಜಿಲ್ಲಾ ಆಹಾರ ಮತ್ತು ಸುರಕ್ಷತಾ ಅಧಿಕಾರಿ ವಿನೋದ್ ್ರತಿಥಿಗಳಾಗಿ ಭಾಗವಹಿಸುವರು. ಸಮಾವೇಶವನ್ನು ಮಾಸ್ ಕೇರಳ ರಾಜ್ಯಾಧ್ಯಕ್ಷ ಸಿ.ಎಚ್.ಪ್ರದೀಪನ್ ಕಣ್ಣೂರು ಉದ್ಘಾಟಿಸಲಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ 60 ಸೋಡಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬರುವ ಸೋಡಾ ಸಣ್ಣ ಸೋಡಾ ಕಂಪನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೊಸ ಕಾಲಕ್ಕೆ ತಕ್ಕಂತೆ ಸಾಂಪ್ರದಾಯಿಕ ಸೋಡಾ ಮತ್ತು ತಂಪು ಪಾನೀಯಗಳು ಬದಲಾಗಬೇಕಾಗಿದ್ದು, ಈ ವಿಷಯಗಳನ್ನು ವಿವರಿಸಲು ಹಾಗೂ ಈ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತುತಪಡಿಸಲು ಕುಟುಂಬ ಸಂಗಮ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೋಶಾಧಿಕಾರಿ ಆನ್ ಸಲಾಂ ಸೆಬಾಸ್ಟಿಯನ್, ಕೆ.ಎಂ.ಅನ್ವರ್ ಕಾಸರಗೋಡು, ಸೆಬಾಸ್ಟಿಯನ್ ಅನ್ಸಲಾಂ ಉಪಸ್ಥಿತರಿದ್ದರು.