ಕಾಸರಗೋಡು: ಕೇರಳ ಕೋಆಪರೇಟಿವ್ ಫೆಡರೇಶನ್ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯನ್ನು ಕಾಸರಗೋಡು ಎಂ.ಜಿ ರಸ್ತೆಯ ವಿ.ಪಿ ಟವರ್‍ನಲ್ಲಿ ಆರಂಭಿಸಲಾಯಿತು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ನೂತನ ಕಚೇರಿ ಉದ್ಘಾಟಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ವಿ. ಕೆ. ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಎಫ್ ಜಿಲ್ಲಾ ಕಾರ್ಯದರ್ಶಿ ವಿ. ಕಮ್ಮಾರನ್, ಸಿಎಂಪಿ ಜಿಲ್ಲಾ ಕಾರ್ಯದರ್ಶಿ ಸಿ. ವಿ. ತಂಬಾನ್, ಕೆ. ಎಂ. ಎಫ್ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಎಂ. ಡಿ. ಕಮಲಾಕ್ಷಿ, ಕೆಎಸ್‍ವೈಎಫ್ ರಾಜ್ಯ ಕಾರ್ಯದರ್ಶಿ ಸುಧೀಶ ಕ್ಯಾತನಪಲ್ಲಿ, ಪಿ. ಕೆ. ರಘುನಾಥ್, ಇ. ವಿ. ದಾಮೋದರನ್, ಸಿ. ಬಾಲನ್, ಟಿ. ಗಂಗಾಧರನ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಟಿ. ವಿ. ಉಮೇಶನ್ ಸ್ವಾಗತಿಸಿದರು. ಸಂಚಾಲಕ ಟಿ. ಕೆ. ವಿನೋದ್ ವಂದಿಸಿದರು.
ನವೆಂಬರ್ 1 ಮತ್ತು 2 ರಂದು ಕಾಸರಗೋಡು ನಗರಸಭಾ ಸಮ್ಮೇಳನ ಸಭಾಂಗಣದಲ್ಲಿ ಕೋಆಪರೇಟಿವ್ ಫೆಡರೇಶನ್ ರಾಜ್ಯ ಸಮ್ಮೇಳನ ನಡೆಯಲಿದೆ.