ಕಾಸರಗೋಡು:ಜಿಲ್ಲಾಡಳಿತದಿಂದ ಆಡಳಿತಭಾಷಾ ಸಪ್ತಾಹ-ಕನ್ನಡ, ಮಲಯಾಳ ಬರಹಗಾರರಿಗೆ ಗೌರವಾರ್ಪಣೆ
ಜಿಲ್ಲಾಡಳಿತ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಮಲೆಯಾಳ ದಿನಾಚರಣೆ ಹಾಗೂ ಆಡಳಿತ ಭಾಷಾ ಸಪ್ತಾಹ ನವೆಂಬರ್ 1 ರಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಲಿದೆ.
ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ಇತಿಹಾಸ ಸಂಶೋಧಕ ಡಾ. ಸಿ.ಬಾಲನ್, ತುಳು, ಕನ್ನಡ ಸಾಹಿತ್ಯ ಮತ್ತು ಭಾಷೆಯ ಉನ್ನತಿಗೆ ಹಾಗೂ ಹಿಂದುಳಿದ ಸಮಾಜದ ಪ್ರಗತಿಗೆ ಶ್ರಮಿಸುತ್ತಿರುವ ಬರಹಗಾರ ಸುಂದರ ಬಾರಡ್ಕ ಅವರನ್ನು ಸನ್ಮಾನಿಸಲಾಗುವುದು.
ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕೆ.ವಿ.ಕುಮಾರನ್ ಪ್ರಧಾನ ಭಾಷಣ ಮಾಡುವರು. ಎ.ಡಿ.ಎಂಪಿ.ಅಖಿಲ್ ಅವರು ಪ್ರಮಾಣ ವಚನ ಬೋಧಿಸುವರು. ಅಧಿಕೃತ ಭಾಷಾ ಸೇವಾ ಜಿಲ್ಲಾ ಪ್ರಶಸ್ತಿ ವಿಜೇತ ಆರ್. ನಂದಲಾಲ್ ಮತ್ತು 'ನಮ್ಮ ಕಾಸರಗೋಡು' ಲಾಂಛನ ಸ್ಪರ್ಧಾ ವಿಜೇತ ನಿತಿನ್ ಅವರನ್ನು ಸಮ್ಮಾನಿಸಲಾಗುವುದು. ಸಹಾಯಕ ಜಿಲ್ಲಾಧಿಕಾರಿ ಎಲ್.ಎ.ಮುಹಮ್ಮದ್ ಶಾಫಿ, ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಟಿ.ವಿ.ಮಧುಸೂದನನ್, ಸ್ಥಳೀಯಾಡಳಿತ ಸಂಸ್ಥೆ ಉಪನಿರ್ದೇಶಕ ಕೆ.ವಿ.ಹರಿದಾಸ್, ರಾಷ್ಟ್ರಕವಿ ಗೋವಿಂದಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಸಾಲಿಯಾನ್, ಅಕ್ಷರ ಗ್ರಂಥಾಲಯ ಕಾರ್ಯದರ್ಶಿ ಕೆ.ಮುಕುಂದನ್, ಹಿರಿಯ ಮೇಲ್ವಿಚಾರಕ ಕೆ.ಟಿ.ಬಾಬು ಪಾಲ್ಗೊಳ್ಳುವರು.
ಪ್ರಶಸ್ತಿ ವಿಜೇತರ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಕಿರಿಯ ಅಧೀಕ್ಷಕ ಎಂ.ವಹಾಬ್ ಮತ್ತು ಸಹಾಯಕ ಮಾಹಿತಿ ಅಧಿಕಾರಿ ಎ.ಪಿ.ದಿಲ್ನಾ ಪರಿಚಯ ನೀಡುವರು.