ಕಾಸರಗೋಡು: ಕೇರಳ ಕೋ-ಆಪರೇಟಿವ್ ಫೆಡರೇಶನ್‍ನ 9 ನೇ ರಾಜ್ಯ ಸಮ್ಮೇಳನ ನ. 2 ಮತ್ತು 3ರಂದು ಕಾಸರಗೋಡಿನ ಸಂಧ್ಯಾರಾಗಂ ತೆರೆದ ಸಭಾಂಗಣದಲ್ಲಿ ಜರುಗಲಿರುವುದಗಿ ಸ್ವಾಗತ ಸಮಿತಿ ಅಧ್ಯಕ್ಷ ವಿ.ಕೆ ರವೀಂದ್ರನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ನವೆಂಬರ್ 2 ರಂದು ಮಧ್ಯಾಹ್ನ 3ಕ್ಕೆ 'ಸಹಕಾರಿ ಕ್ಷೇತ್ರ, ವರ್ತಮಾನ ಮತ್ತು ಭವಿಷ್ಯ' ಕುರಿತು ವಿಚಾರ ಸಂಕಿರಣವನ್ನು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಕೇರಳ ಸಹಕಾರಿ ಫೆಡರೇಶನ್ ಅಧ್ಯಕ್ಷ ಸಿ.ಎನ್.ವಿಜಯಕೃಷ್ಣನ್ ಅಧ್ಯಕ್ಷತೆ ವಹಿಸುವರು. ಕೆಎಸ್‍ಎಫ್ ಪ್ರಧಾನ ಕಾರ್ಯದರ್ಶಿ ಎಂ.ಪಿ ಸಾಜು ವಿಷಯ ಮಂಡಿಸುವರು. ಕೇರಳ ಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ, ಯುಡಿಎಫ್ ಜಿಲ್ಲಾ ಸಮಿತಿ ಅಧ್ಯಕ್ಷ ಎ.ಗೋವಿಂದನ್ ನಾಯರ್,ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ರಹಿಮಾನ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್, ಸಿಪಿಐ ಮುಖಂಡ ಕೆ.ವಿ.ಕೃಷ್ಣನ್ ಮೊದಲಾದವರು ಪಾಲ್ಗೊಳ್ಳುವರು. ಸಾಂಸ್ಕøತಿಕ ಕಾರ್ಯಕ್ರ ಮದ ಅಂಗವಾಗಿ ಕಣ್ಣೂರು ಮಿಲೇನಿಯಂ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 3 ರಂದು ಕಾಸರಗೋಡು ನಗರಸಭಾ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಮಾವೇಶವನ್ನು ಮಾಜಿ ವಿರೋಧ ಪಕ್ಷದ ನಾಯಕ, ಶಾಸಕ ರಮೇಶ್ ಚೆನ್ನಿತ್ತಲ ಉದ್ಘಾಟಿಸುವರು. ಸಿ.ಎನ್.ವಿಜಯಕೃಷ್ಣನ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಟಿ.ವಿ.ಉಮೇಶನ್, ಸ್ವಗತಸಂಘದ ಪೋಷಕ ಸದಸ್ಯ ವಿ. ಕಮ್ಮಾರನ್, ಕಾರ್ಯಕಾರಿ ಸಮಿತಿ ಸದಸ್ಯ ಸಿ.ವಿ ತಂಬಾನ್, ಸಂಚಾಲಕ ಟಿ.ಕೆ.ವಿನೋದನ್ ಉಪಸ್ಥಿತರಿದ್ದರು.