ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಲಯಾಳ ನಟ ಸಿದ್ದೀಕ್ ಬಂಧಿಸದಂತೆ ನೀಡಿದ್ದ ರಕ್ಷಣೆಯನ್ನು ಸುಪ್ರೀಂ ಕೋರ್ಟ್ 2 ವಾರಗಳಿಗೆ ವಿಸ್ತರಿಸಿದೆ.
ಪ್ರಕರಣದ ತನಿಖೆಗೆ ಅಗತ್ಯ ಸಹಕಾರ ನೀಡುತ್ತಿಲ್ಲ ಎಂಬ ಕೇರಳ ಪೊಲೀಸರ ವರದಿಗೆ ಮರು ಅರ್ಜಿ ಸಲ್ಲಿಸಲು ಸಿದ್ದೀಕ್‌ಗೆ ನ್ಯಾ.
ಸಿದ್ದೀಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ. ಗಿರಿ ಅವರು ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದರು. ಜತೆಗೆ ತಮ್ಮ ಕಕ್ಷಿದಾರ ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.
ಕೇರಳ ಪೊಲೀಸರ ಪರವಾಗಿ ವಾದ ಮಂಡಿಸಿದ ರಂಜಿತ್ ಕುಮಾರ್, 'ಸಿದ್ಧಕಿ ಅವರು ತನಿಖೆಗೆ ಅಡಚಣೆ ಉಂಟು ಮಾಡುತ್ತಿದ್ದಾರೆ. ಜತೆಗೆ ಸಾಮಾಜಿಕ ಮಾಧ್ಯಮ ಸೇರಿದಂತೆ ಕೆಲವೊಂದು ಪ್ರಮುಖ ಎಲೆಕ್ಟ್ರಾನಿಕ್ ಸಾಕ್ಷಿಗಳನ್ನು ನಾಶಪಡಿಸಿದ್ದಾರೆ' ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ದೂರುದಾರರು ಎಂಟು ವರ್ಷಗಳ ಬಳಿಕ ದೂರು ನೀಡಿರುವುದನ್ನು ಪೀಠವು ಒತ್ತಿ ಹೇಳಿತು.
'2019ರಿಂದ ತನಗೆ ಕಿರುಕುಳ ಹಾಗೂ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪಿಸಿ ಮಹಿಳೆಯೊಬ್ಬರು ಸಿದ್ಧೀಕ್ ದೂರು ಸಲ್ಲಿಸಿದ್ದರು.
ಸಿನಿಮಾದಲ್ಲಿ ಅವಕಾಶ ನೀಡುವ ಆಮೀಷವೊಡ್ಡಿ ಸಿದ್ದೀಕ್ ಅವರು ತಿರುವನಂತಪುರದ ಹೋಟೆಲ್‌ವೊಂದರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವ ಕಲಾವಿದೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಸಿದ್ದೀಕ್ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಸಿದ್ದೀಕ್ ಅವರ ಬಂಧನಕ್ಕೆ ಸುಪ್ರೀಂ ಕೋರ್ಟ್ ಅ. 12ರಂದು ಮಧ್ಯಂತರ ತಡೆ ನೀಡಿತ್ತು.