ಕುಂಬಳೆ: ಬಂದ್ಯೋಡು ಸನಿಹದ ಅಡ್ಕ ವೀರನಗರದಲ್ಲಿ ಸ್ಥಳನಾಮ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಭಿನ್ನಾಭಿಪ್ರಾಐ ತಲೆದೋರಿ, ಸಂಘರ್ಷಾವಸ್ಥೆ ಸೃಷ್ಟಿಸಿದ್ದು, ಪೊಲೀಸರು ಸಕಾಲದಲ್ಲಿ ಆಗಮಿಸಿ ಬಲಪ್ರಯೋಗಿಸಿ ಚದುರಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಗೆ ಕಾರಣರಾದ ಎರಡೂ ವಿಭಾಗಗಳ 200ಮಂದಿ ವಿರುದ್ಧ ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಕೆ.ವಿ ವಿನೋದ್ ಕೇಸು ದಾಖಲಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆಯೇ ಸ್ಥಳನಾಮದ ಬಗ್ಗೆ ವಿವಾದ ಉಂಟಾಗಿದ್ದು, ಕುಂಬಳೆಯ ಈ ಹಿಂದಿನ ಇನ್ಸ್‍ಪೆಕ್ಟರ್ ವಿ.ವಿ ಮನೋಜ್ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದ್ದರು. ಅಲ್ಲದೆ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಿದ್ದರು. ಇದೀಗ ಮತ್ತೆ ವಿವಾದ ತಲೆದೋರಿದೆ.