ಕಾಸರಗೋಡು: ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ 'ಕಾಸರಗೋಡು ದಸರಾ-2024'ಕಾರ್ಯಕ್ರಮ4ರಂದು ಕಾಸರಗೋಡು ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಜರುಗಲಿದೆ. ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ರಾಘವೇಂದ್ರ ನಾಯ್ಕ್ ಉದ್ಘಾಟಿಸುವರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ನಿವೃತ್ತ ಟ್ರೆಶರಿ ಅಧಿಕಾರಿ ಮುರಳೀಕೃಷ್ಣ ಹಾಗೂ ನಿವೃತ್ತ ಶಿಕ್ಷ ನಾರಾಯಣ ಮಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ದಸರಾ ಸತ್ಸಂಗ ನಡೆಸಿಕೊಡುವರು.
ಸಂಜೆ 6ರಿಂದ ಸಾಂಸ್ಕøತಿಕ ಕಲಾ ಕಾರ್ಯಕ್ರಮ ನಡೆಯುವುದು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು, ಕನ್ನಡ ಗ್ರಾಮ ಪಾರೆಕಟ್ಟ ಹಾಗೂ ಅಮ್ಮ ಇವೆಂಟ್ಸ್ ಪಾರೆಕಟ್ಟ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುವುದು.