ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ಆಶ್ರಯದಲ್ಲಿ ದೇಶಿಯ ಮಕ್ಕಳ ದಿನಾಚರಣೆ ಅಂಗವಾಗಿ "ತುಳುನಾಡ ಮಕ್ಕಳ ಹಬ್ಬ" ತುಳುನಾಡ ಬಾಲೆ ಬಂಗಾರ್- 2024 ಮುದ್ದು ಮಕ್ಕಳ ಪೋಟೋ ಸ್ಪರ್ಧೆ- ಸೀಸನ್ 9 ಕಾರ್ಯಕ್ರಮ ನಡೆಯಲಿದೆ.
ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಭಾವಚಿತ್ರವನ್ನು 6x9 ಸೈಜ್ ನಲ್ಲಿ 1 ಭಾವಚಿತ್ರವನ್ನು ಮಾತ್ರ ಕಳುಹಿಸತಕ್ಕದ್ದು, ಭಾವ ಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಜನನ ಪ್ರಮಾಣ ಪತ್ರದ ಕರಡು ಪ್ರತಿ, ಪೋಷಕರ ಹೆಸರು, ವಿಳಾಸವನ್ನು ಸ್ಪಷ್ಟವಾಗಿ ಬರೆದಿರತಕ್ಕದ್ದು, ತುಳುನಾಡಿನ ಸಂಸ್ಕøತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿನ ಪೋಟೋಗಳಿಗೆ ಸ್ಪರ್ಧೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ, ಚಿಕ್ಕಮಂಗಳೂರು ಜಿಲ್ಲೆಯ ಮಕ್ಕಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಅರ್ಹರು. ಪೋಟೋಗಳನ್ನು ಕೊರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ನವೆಂಬರ್ ತಿಂಗಳ 05 ರ ಒಳಗೆ ತಲುಪುವಂತೆ ಕಳುಹಿಸಬಹುದು. ನವೆಂಬರ್ 10 ರಂದು ತೀರ್ಪುಗಾರರು ಹಾಗೂ ಪ್ರಮುಖ ಅತಿಥಿ ಗಣ್ಯರ ಸಮ್ಮುಖದಲ್ಲಿ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆಯುವ ಸಮಾರಂಭದಲ್ಲಿ "ತುಳುನಾಡ ಬಾಲೆ ಬಂಗಾರ್ - 2024" ಸ್ಪರ್ಧಾ ವಿಜೇತರ ಘೋಷಣೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಬಹುಮಾನಗಳು ಹಾಗೂ ಪ್ರಮಾಣ ಪತ್ರ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣಪತ್ರವನ್ನು ನೀಡಲಾಗುವುದು. ಕಾರ್ಯಕ್ರಮವನ್ನು ನಮ್ಮ ಮಂಜೇಶ್ವರ, ಝೂಮ್ ಕರ್ನಾಟಕ, ಮಂಜು ಶ್ರೀ ನ್ಯೂಸ್, ವಿಶೇಷ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು, ರತನ್ ಕುಮಾರ್ ಹೊಸಂಗಡಿ ಅಧ್ಯಕ್ಷರು ತುಳುನಾಡ ಬಾಲೆ ಬಂಗಾರ್ ಸಮಿತಿ, ತುಳುವೆರೆ ಆಯನೊ ಕೂಟ ಮಂಜೇಶ್ವರ, ಸಿಂಡ್ರೆಲಾ ನರ್ಸರಿ ಬಳಿ, ಹೊಸಬೆಟ್ಟು ಮಂಜೇಶ್ವರ - 671323, ಕಾಸರಗೋಡು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗೆ 7034338773, 974636850 ಗೆ ಸಂಪರ್ಕಿಸಲು ಕೋರಲಾಗಿದೆ.