ದುಬೈ: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಯುಎಇ ದುಬೈ ಘಟಕ ಮತ್ತು ಕರ್ನಾಟಕ ಸರ್ಕಾರದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ವಿಶ್ವದ ಅತಿ ಪ್ರಸಿದ್ಧ ಪ್ರವಾಸಿ ತಾಣವಾದ ದುಬೈಯಲ್ಲಿ 'ದುಬೈ ಗಡಿನಾಡ ಉತ್ಸವ-2024' ಅಕ್ಟೋಬರ್ ಇತ್ತೀಚೆಗೆ ಜರುಗಿತು. ಯುಎಇಯಲ್ಲಿ ಇರುವ ಕಾಸರಗೋಡು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಸಹಸ್ರಾರು ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಿಸ್ಮರಣೀಯ ಹಾಗೂ ಐತಿಹಾಸಿಕ ಯಶಸ್ವಿಗೆ ಸಾಕ್ಷಿಯಾದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಡಿನಾಡ ಉತ್ಸವದ ಉದ್ಘಾಟನೆಯನ್ನು ಆಕ್ಮೇ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್ ಶೇರಿಗಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇಯ ಸಲಹ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಂತೂರು ವಹಿಸಿದ್ದರು. ಸಭೆಯಲ್ಲಿ ಸಮಾಜದ ಸಾಧಕರಾದ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ಸತೀಶ್ ಪೂಜಾರಿ,ಉದ್ಯಮಿ ಸಮಾಜ ಸೇವಕ ರೊನಾಲ್ಡೊ ಮಾರ್ಟಿಸ್, ಸಮಾಜ ಸೇವಕ ಶಿವಶಂಕರ ನೆಕ್ರಾಜೆ,ಉದ್ಯೋಗಿ ಕೆ.ಸಿ. ಲಿತೇಶ್ ಕುಮಾರ್ ಕುಂಬ್ಳೆ ಅವರನ್ನು ಸನ್ಮಾನಿಸಲಾಯಿತು. ಯುಎಇಯ ಶ್ರೇಷ್ಠ ಸಂಘಟನಾ ಪುರಸ್ಕಾರವನ್ನು ಯುಎಇಯ ಕನ್ನಡ ಪರ ಸಂಸ್ಥೆಯಾದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ದಿ ಸ್ಪೀಚ್ ಕ್ಲಿನಿಕ್ ದುಬೈ ಸಂಸ್ಥೆಗಳನ್ನೂ ಸನ್ಮಾನಿಸಿ ಗೌರವಿಸಲಾಯಿತು.ಅಲ್ ಫರ್ಹಾನ್ ಎಕ್ಸ್ಚೇಂಜ್ ನಾ ಗುರುಪ್ರಸಾದ್ ಮಂಜೇಶ್ವರ, ರವಿ ರಾಜ್ ಶೆಟ್ಟಿ ಕಾಸರಗೋಡು, ಸಂದೀಪ್ ಜೆ.ಅಂಚನ್ ಮುಲ್ಕಿ, ರಶೀದ್ ಬಾಯಾರ್, ಅಯೂಬ್ ಅಟ್ಟೆಗೋಳಿ, ಸಿದ್ಧಿಖ್ ಅಜ್ಮಾನ್, ರಿಯಾಝ್ ಅಹಮ್ಮದ್ ಗುಲ್ ಫರಾಸ್, ಅಬ್ದುಲ್ಲ ಕಾಂಡೆಲ್ ಪಚ್ಚಂಬಳ, ಮುನೀರ್ ಪಾರ ಕುuಟಿಜeಜಿiಟಿeಜಣೂರು, ಮುಂತಾದವರು ಉಪಸ್ಥಿತರಿದ್ದರು. ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಸ್ವಾಗತಿಸಿ, ಅಶ್ರಫ್ ಪಿ.ಪಿ.ಬಾಯಾರ್ ವಂದಿಸಿದರು.
ಬಳಿಕ ವಿವಿಧ ತಂಡಗಳಿಂದ ಜಾನಪದ ನೃತ್ಯ, ಭರತನಾಟ್ಯ, ತಿರುವಾದಿರಕಳಿ, ಕೋಲಾಟ, ಒಪ್ಪನ, ದಫ್ ಮುಟ್ಟು, ಯಕ್ಷಗಾನ ಭಾಗವತಿಕೆ ಮುಂತಾದ ಕಾರ್ಯಕ್ರಮಗಳು ಹಾಗೂ ಚಲನಚಿತ್ರ ಗಾಯಕಿ ಪುಷ್ಪ ಆರಾದ್ಯ ಮತ್ತು ಗಡಿನಾಡ ಗಾಯಕ ಗಾಯಕಿಯರಿಂದ ಸಂಗೀತ ರಸ ಸಂಜೆ ನಡೆಯಿತು.
ರಾತ್ರಿ 8 ಕ್ಕೆ ನಡೆದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ಕರ್ನಾಟಕ ರಾಜ್ಯೋದಯದ ಸುವರ್ಣ ಸಂಭ್ರಮದ ವರ್ಷವನ್ನು ವಿಶೇಷ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ವಿಶೇಷ ನಾಗರಿಕ ಸನ್ಮಾನ : ಕರ್ನಾಟಕ ಶಿರೂರಿನಲ್ಲಿ ಪ್ರಕೃತಿ ದುರಂತಕ್ಕೊಳಗಾದ ಪ್ರದೇಶದಲ್ಲಿ ಸುದೀರ್ಘ ಎರಡೂವರೆ ತಿಂಗಳುಗಳ ಕಾಲ ನಡೆದ ರಕ್ಷಣಾ ಚಟುವಟಿಕೆಯ ಸಂದರ್ಭದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಗಳಿಗೆ ನೇತ್ವತೃ ನೀಡಿ ಜನಮೆಚ್ಚುಗೆ ಗಳಿಸಿದ ಜನಪ್ರತಿನಿಧಿ ಕೇರಳದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಸಮಾಜ ಸೇವಕ ಕೆಕೆ ಶೆಟ್ಟಿ, ಅಬುದಾಬಿಯ ಇಂಡಿಯನ್ ಸೋಶಿಯಲ್ ಹಾಗೂ ಕಲ್ಚರಲ್ ಸೆಂಟರಿನ ನೂತನ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಇವರನ್ನು ಸನ್ಮಾನಿಸಲಾಯಿತು.2024 ನೇ ಸಾಲಿನ ದುಬೈ ಗಡಿನಾಡ ರತ್ನ ಪ್ರಶಸ್ತಿ ಪುರಸ್ಕೃತರಾದ ಯುಎಇಯ ಕೆ. ಎನ್.ಆರ್.ಐ ಪಾರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬಾಯಿಯ ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸ, ಕುನಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಫಕ್ರುದ್ಧೀನ್ ಕುನಿಲ್, ದುಬೈ ಉದ್ಯಮಿ ಹಾಗೂ ಕಲಾಪೆÇೀಷಕ ಮಹಾಬಲೇಶ್ವರ ಭಟ್ ಎಡಕ್ಕಾನ , ಯುಎಇ ಅಲ್‍ಬಾಕ್ ಗೋಲ್ಡ್ ಎಂಡ್ ಡೈಮಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸಫ್ ಉಪ್ಪಳ, ದುಬೈ ಆಸ್ಟರ್ ಡಿ.ಎಂ ಹೆಲ್ತ್ ಕೇರ್ ನ ಸಹಾಯಕ ಜನರಲ್ ಮೇನೇಜರ್ ಬಶೀರ್ ಬಂಟ್ವಾಳ, ದುಬೈನ ಬ್ಯುಸಿನೆಸ್ ಗೇಟ್ ಹಾಗೂ ವೂಮನ್ ಸರ್ಕಲ್ ಸಂಸ್ಥಾಪಕಿ ಲೈಲಾ ರಹಲ್ ಅಲ್ ಅತ್ಫಾನಿ , ಇಕ್ಬಾಲ್ ಅಬತೂರು ಮತ್ತು ಮಲಯಾಳಂ ಖ್ಯಾತ ಚಿತ್ರ ನಿರ್ದೇಶಕ ತುಳಸಿದಾಸ್ ಪ್ರಶಸ್ತಿ ಪ್ರದಾನಗೈದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ಅಧ್ಯಕ್ಷ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿ ಕಾಸರಗೋಡು ಘಟಕದ ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ್, ಅಬುದಾಭಿಯ ಸಮಾಜ ಸೇವಕ ಮೋನು ಅಲ್ನೂರು,ಅಲ್ ಫರ್ದನ್ ಎಕ್ಸೆಂಜ್ ನ ಆತ್ಮನಂದ ರೈ, ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಡಾ. ಬಸವರಾಜ ಹೊನಗಲ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇಯ ಸಲಹ ಸಮಿತಿಯ ಸದಸ್ಯ ಜೋಸೆಫ್ ಮಾತಿಯಾಸ್, ಸುಧಾಕರ ರಾವ್ ಪೇಜಾವರ , ಶೇಖ್ ಮುಜೀಬ್ ರಹಿಮಾನ್, ಮಸ್ಕತ್ ಘಟಕದ ಅಧ್ಯಕ್ಷ ಅಬೂಬಕ್ಕರ್ ಬೊಳ್ಳಾರ್,ತೋಯ್ದು ಸಿಟಿ ಗೋಲ್ಡ್, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಗಡಿನಾಡ ಉತ್ಸವ ಸಮಿತಿಯ ಸಂಚಾಲಕ ಝಡ್.ಎ.ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರಾದ ಮಂಜುನಾಥ ಕಾಸರಗೋಡು, ಸುಗಂದರಾಜ್ ಬೇಕಲ್,ಜೇಶ್ ಬಾಯಾರ್, ಅಮಾನ್ ತಲೇಕಳ, ಅನೀಶ್ ಶೆಟ್ಟಿ ಜೋಡುಕಲ್ಲು, ಅಲಿ ಸಾಂಗ್ ಯುಸುಫ್ ಶೇಣಿ, ಆಸೀಫ್ ಹೊಸಂಗಡಿ,ಝುಬೈರ್ ಕುಬಣೂರು, ಇಬ್ರಾಹಿಂ ಬೇರಿಕೆ ಅವರು ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.ಘಟಕದ ಕಾರ್ಯದರ್ಶಿ ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿ, ಆರತಿ ಅಡಿಗ,ವಿಘ್ನೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಬಾಜೂರಿ ವಂದಿಸಿದರು.