ವಡೋದರಾ: Airbus ಸಹಭಾಗಿತ್ವದಲ್ಲಿ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್ ನಿರ್ಮಿಸುತ್ತಿರುವ ಮೊದಲ C 295 ವಿಮಾನವನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರೈಸುವ ಗುರಿ ಹೊಂದಿರುವುದಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಸೋಮವಾರ ಹೇಳಿದ್ದಾರೆ.
ಗುಜರಾತ್ ನ ವಡೋದರಾದಲ್ಲಿ ಸಿ-295 ಮಿಲಿಟರಿ ವಿಮಾನ ತಯಾರಿಕೆಯ ಘಟಕ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚಂದ್ರಶೇಖರನ್, ಈಗಿನಿಂದ ನಿಖರವಾಗಿ ಎರಡು ವರ್ಷಗಳ ನಂತರ ನಾವು ದೇಶಿಯವಾಗಿ ತಯಾರಿಸಿದ ಮೊದಲ C-295 ವಿಮಾನವನ್ನು ತಲುಪಿಸುತ್ತೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ದೇಶದ ಮೊದಲ ಖಾಸಗಿ ಮಿಲಿಟರಿ ವಿಮಾನ ತಯಾರಿಕೆ ಘಟಕವನ್ನು ಉದ್ಘಾಟಿಸಿದರು.
ಭಾರತ ಮತ್ತು ಭಾರತೀಯ ರಕ್ಷಣಾ ವಲಯಕ್ಕೆ ಇದು ಅತ್ಯಂತ ಮಹತ್ವದ ದಿನವಾಗಿದೆ. ಇನ್ನೇರಡು ವರ್ಷಗಳಲ್ಲಿ ಮೊದಲ ವಿಮಾನವನ್ನು ತಲುಪಿಸುತ್ತೇವೆ. ಈ ಯೋಜನೆಯು ಮುಂದಿನ ಪೀಳಿಗೆಯ ಮುಂದುವರಿದ ಉತ್ಪಾದನೆಗೆ ಭಾರತವನ್ನು ಮುನ್ನಡೆಸುತ್ತದೆ. ಇದು ವೈವಿಧ್ಯಮಯ ಮತ್ತು ಅತ್ಯಾಧುನಿಕತೆಯ ಕೌಶಲ್ಯ ಪರಿಸರ ವ್ಯವಸ್ಥೆ ನಿರ್ಮಿಸುತ್ತದೆ. ಜೊತೆಗೆ ವಾಯುಪಡೆಗೆ ಹೆಚ್ಚು ಅಗತ್ಯವಾದದ್ದನ್ನು ಪೂರೈಸುತ್ತದೆ. ನಮ್ಮ ಉದ್ಯಮಿಗಳು ಮತ್ತು ಯುವಕರಿಗೆ ಹೆಚ್ಚಿನ ತಂತ್ರಜ್ಞಾನದ ಅವಕಾಶಗಳನ್ನು ನೀಡುತ್ತದೆ ಎಂದರು.
C-295 ವಿಮಾನ ತಯಾರಿಕೆ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 56 ವಿಮಾನಗಳಿವೆ, ಅದರಲ್ಲಿ 16 ಸ್ಪೇನ್‌ನಿಂದ ನೇರವಾಗಿ ಏರ್‌ಬಸ್‌ನಿಂದ ತಲುಪಿಸುತ್ತಿದೆ ಮತ್ತು ಉಳಿದ 40 TATA ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಲಾಗುವುದು. ಇದು ರಾಷ್ಟ್ರದ ರಕ್ಷಣಾ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.