ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ದಸರಾ-ನೃತ್ಯೋತ್ಸವ ಸಮಾರೋಪ ಅ.20 ರಂದು ಮಧ್ಯಾಹ್ನ 2 ರಿಂದ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರಗಲಿದೆ.
ಮಧ್ಯಾಹ್ನ 2 ಕ್ಕೆ ದೇವರ ನಾಮಾವಳಿ, 2.30 ರಿಂದ ದಸರಾ ಸಮಾರೋಪ ಚಾಲನೆ, ನೃತ್ಯೋತ್ಸವ, ಸಂಜೆ 4 ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು, ಡಾ.ಜಯಶ್ರೀ ನಾಗರಾಜ್ ಅಧ್ಯಕ್ಷತೆ ವಹಿಸುವರು. ಅಂತರಾಷ್ಟ್ರೀಯ ನೃತ್ಯ ಗುರು ವಿದ್ವಾನ್ ಕೋಲಾರ ರಮೇಶ್ ದೀಪ ಪ್ರಜ್ವಲಿಸುವರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ದಸರಾ ಸಮಾರೋಪ ನುಡಿಯನ್ನಾಡುವರು. ಅಭ್ಯಾಗತರಾಗಿ ವಿದುಷಿಯರಾದ ಅನುಪಮಾ ರಾಘವೇಂದ್ರ, ಸಿಂಧು ಭಾಸ್ಕರನ್, ಮಂಜುಳಾ ಸುಬ್ರಹ್ಮಣ್ಯ, ಸೌಮ್ಯಾ ಶ್ರೀಕಾಂತ್, ಸುಚಿತ್ರಾ, ವಿದ್ಯಾ ಮಹೇಶ್, ಭವ್ಯ ತನುಜಾಕ್ಷಾ, ಸಂಧ್ಯಾ ಮಾತಾಜಿ, ಸುಶ್ಮಿತಾ ಯತೀಶ್ ಆಚಾರ್ಯ ಭಾಗವಹಿಸುವರು. ನ್ಯಾಯವಾದಿ ಸದಾನಂದ ರೈ, ರಾಮ್‍ಪ್ರಸಾದ್, ಕೃಷ್ಣ ಪ್ರಸಾದ್ ಕೋಟೆಕಣಿ, ಮೀರಾ ಕಾಮತ್ ಗೌರವ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಅಜಿತ್ ಕೊರಕೋಡು ಅವರಿಗೆ ಗೌರವಾರ್ಪಣೆ ನಡೆಯಲಿದೆ. `ಗೆಜ್ಜೆ ಹೆಜ್ಜೆ' ಸಂಸ್ಥೆಗೆ ಚಾಲನೆ ನೀಡಲಾಗುವುದು.
ಬೆಂಗಳೂರು ಕೆ.ಆರ್.ಪುರಂ ನ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿಯ ಕಲಾವಿದರಿಂದ ಕುವೆಂಪು ರಾಮಾಯಣ ದರ್ಶನ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.