ಮೊರಿಗಾಂವ್: ಅಸ್ಸಾಂನ ಮೊರಿಗಾಂವ್ ಜಿಲ್ಲಾ ಕಾರಾಗೃಹದಿಂದ ಐವರು ವಿಚಾರಣಾಧೀನ ಕೈದಿಗಳು ಶುಕ್ರವಾರ ಮುಂಜಾನೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊರಿಗಾಂವ್: ಅಸ್ಸಾಂನ ಮೊರಿಗಾಂವ್ ಜಿಲ್ಲಾ ಕಾರಾಗೃಹದಿಂದ ಐವರು ವಿಚಾರಣಾಧೀನ ಕೈದಿಗಳು ಶುಕ್ರವಾರ ಮುಂಜಾನೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಡರಾತ್ರಿ 1 ರಿಂದ 2 ಗಂಟೆಯ ನಡುವೆ ಜೈಲಿನ ಕಂಬಿಗಳನ್ನು ಮುರಿದು ಪರಾರಿಯಾಗಿದ್ದಾರೆ ಎಂದು ಮೊರಿಗಾಂವ್‌ನ ಜಿಲ್ಲಾಧಿಕಾರಿ ದೇವಶಿಶ್ ಶರ್ಮಾ ತಿಳಿಸಿದ್ದಾರೆ.
ಈ ಐವರು ವಿಚಾರಣಾಧೀನ ಕೈದಿಗಳು ಪೋಕ್ಸೊ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ತಮ್ಮ ಸೆಲ್‌ನ ಕಬ್ಬಿಣದ ಗ್ರಿಲ್ ಅನ್ನು ಮುರಿದು, ಬೆಡ್ ಶೀಟ್‌ಗಳು, ಬ್ಲಾಂಕೆಟ್‌ಗಳು ಮತ್ತು ಲುಂಗಿಗಳನ್ನು ಬಳಸಿ ಹಗ್ಗವನ್ನು ತಯಾರಿಸಿ ಜೈಲಿನ 20 ಅಡಿ ಎತ್ತರದ ಗೋಡೆಯಿಂದ ಜಿಗಿದು ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಾರಿಯಾದ ಕೈದಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಸಿ ಶರ್ಮಾ ತಿಳಿಸಿದ್ದಾರೆ.
ಜೈಲಿನ ಭದ್ರತಾ ಸಿಬ್ಬಂದಿಯಿಂದ ಲೋಪವಾಗಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಐವರು ಕೈದಿಗಳ್ಲಿ ಮೂವರನ್ನು ಲಹರಿಘಾಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಇನ್ನಿಬ್ಬರನ್ನು ಮೊಯಿರಾಬರಿ ಮತ್ತು ತೇಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣ ಸಂಬಂಧ ಬಂಧಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.