ಕಾಸರಗೋಡು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವು ಕಾಸರಗೋಡು ಜಿಲ್ಲೆಯಲ್ಲಿ ಕುಂದುಕೊರತೆ ನಿವಾರಣಾ ಅದಾಲತ್ ನ್ನು ಅಕ್ಟೋಬರ್ 22 ಮತ್ತು 23 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಕಾಸರಗೋಡು ಪುರಸಭೆಯ ಸಮ್ಮೇಳನ ಸಭಾಂಗಣದಲ್ಲಿ ನಡೆಸಲಿದೆ.
ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್, ಸದಸ್ಯರುಗಳಾದ ನ್ಯಾಯವಾದಿ. ಸೇತು ನಾರಾಯಣನ್ ಮತ್ತು ಟಿ.ಕೆ.ವಾಸು ನೇತೃತ್ವ ವಹಿಸಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಆಯೋಗಕ್ಕೆ ಸಮರ್ಪಿಸಿದ ದೂರು, ಮುಂದೆ ತೀರ್ಪು ನೀಡಲು ಬಾಕಿ ಇರುವ ಪ್ರಕರಣಗಳಲ್ಲಿ ದೂರುದಾರರು, ವಿರೋಧ ಪಕ್ಷಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಖುದ್ದಾಗಿ ಆಲಿಸಿ ದೂರುಗಳನ್ನು ಇತ್ಯರ್ಥಗೊಳಿಸಲಾಗುವುದು. ಹೊಸ ದೂರುಗಳನ್ನು ಸ್ವೀಕರಿಸುವ ಸೌಲಭ್ಯವೂ ಇರುವುದು. ಪೋಲೀಸ್, ಕಂದಾಯ, ಅರಣ್ಯ, ಶಿಕ್ಷಣ, ಪಂಚಾಯತಿ, ಆರೋಗ್ಯ, ಸಹಕಾರ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಅಭಿವೃದ್ಧಿ ಮುಂತಾದ ವಿವಿಧ ಇಲಾಖೆಗಳ ಅಧಿಕಾರಿಗಳು ಕುಂದುಕೊರತೆ ನಿವಾರಣಾ ಅದಾಲತ್ ನಲ್ಲಿ ಹಾಜರಾಗಲಿದ್ದಾರೆ.