ಬದಿಯಡ್ಕ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದ ನೂತನ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಅಕ್ಟೋಬರ್ 23ರಂದು ಬುಧವಾರ ಬೆಳಗ್ಗೆ 10.33ರ ಧನುರ್ಲಗ್ನ ಶುಭಮುಹೂರ್ತದಲ್ಲಿ ಜರಗಲಿರುವುದು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಹಸ್ತದಿಂದ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಂದಿರದ ಪುರೋಹಿತ ಕಿಳಿಂಗಾರು ವೇದಮೂರ್ತಿ ಶಿವಶಂಕರ ಭಟ್ ಅವರು ವೈದಿಕ ಹಾಗೂ ಶಿಲ್ಪಿಗಳಾದ ರಮೇಶ್ ಕಾರಂತ ಶಿಲ್ಪಶಾಸ್ತ್ರದ ನೇತೃತ್ವ ವಹಿಸುವರು. 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಲಿರುವರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಉದ್ಘಾಟಿಸಲಿರುವರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಗೌರವ ಉಪಸ್ಥಿತರಿರುವರು. ಜ್ಯೋತಿಷ್ಯರತ್ನ ಬೇಳ ಪದ್ಮನಾಭ ಶರ್ಮ ಇರಿಞÁಲಕ್ಕುಡ, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ, ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು, ಉದ್ಯಮಿ ದಿನಕರ ಭಟ್ ಮಾವೆ ವಿಟ್ಲ ಅಭ್ಯಾಗತರಾಗಿ ಪಾಲ್ಗೊಳ್ಳಲಿರುವರು. ಊರಿನ ಗಣ್ಯರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿರುವರು.
ಸಾಯಂ ಸಂಧ್ಯಾ ಭಜನಾ ಸಪ್ತಾಹ :
ನೀರ್ಚಾಲಿನ ಹೃದಯ ಭಾಗದಲ್ಲಿ ಸುಮಾರು 49 ವರ್ಷಗಳ ಹಿಂದೆ ಸ್ಥಾಪಿತವಾದ ಶ್ರೀಮಂದಿರದ ಪುನರ್ ನಿರ್ಮಾಣ ಕಾರ್ಯವು ಅತಿಶೀಘ್ರವಾಗಿ ನೇರವೇರಲಿ ಎಂಬ ಸಂಕಲ್ಪದೊಂದಿಗೆ ಅಕ್ಟೋಬರ್ 16ರಿಂದ ಅಕ್ಟೋಬರ್ 22ರ ತನಕ ಸಂಜೆ 6ರಿಂದ 8.30ರ ತನಕ ಊರಪರವೂರ ವಿವಿಧ ಭಜನಾ ಸಂಘಗಳಿಂದ ಸಾಯಂಸಂಧ್ಯಾ ಭಜನಾ ಸಪ್ತಾಹ ನಡೆಯಲಿದೆ. ಈ ಎಲ್ಲಾ ಕಾರ್ಯಗಳಲ್ಲಿ ಭಗವದ್ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿತ್ರ:: ನೂತನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಎಡನೀರು ಶ್ರೀಗಳು ಬಿಡುಗಡೆಗೊಳಿಸಿದರು.