ತ್ರಿಶೂರ್: ಧನ್ವಂತರಿ ಆಯುರ್ವೇದ ಭವನ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಧನ್ವಂತರಿ ಪ್ರತಿಮೆಯನ್ನು ನ.10ರಂದು ಅನಾವರಣಗೊಳಿಸಲಾಗುವುದು. ಆಸ್ಪತ್ರೆಯ ಔಷಧ ಕೊಠಡಿಯಲ್ಲಿ 24 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಗಂಗಾ, ಯಮುನಾ, ಬ್ರಹ್ಮಪುತ್ರ, ಗೋದಾವರಿ, ನರ್ಮದಾ ಮತ್ತು ಸಿಂಧು ಮುಂತಾದ 24 ಪವಿತ್ರ ನದಿಗಳ ನೀರನ್ನು 24 ಆಯುರ್ವೇದ ಆಚಾರ್ಯರು ಪ್ರತಿಮೆಗೆ ಅಭಿಷೇಕಗೈಯ್ಯಲು ಬಳಸುತ್ತಾರೆ.
ಆಯುರ್ವೇದ ಮತ್ತು ಸಾಂಖ್ಯ ಶಾಸ್ತ್ರದ ಪ್ರಕಾರ ಬ್ರಹ್ಮಾಂಡದ 24 ತತ್ವಗಳನ್ನು ಪ್ರತಿನಿಧಿಸಲು ಪ್ರತಿಮೆಯ ಎತ್ತರವನ್ನು 24 ಅಡಿಗಳಿಗೆ ನಿಗದಿಪಡಿಸಲಾಗಿದೆ. ಪ್ರತಿಮೆಯ ಮುಂಭಾಗದಲ್ಲಿ ದೇಶದ ನಕ್ಷೆಯನ್ನೂ ಹಾಕಲಾಗಿದ್ದು, ಆಯಾ ರಾಜ್ಯಗಳಿಂದ ಸಂಗ್ರಹಿಸಿದ ಮಣ್ಣನ್ನು ಬಳಸಿ ನಿರ್ಮಿಸಲಾಗಿದೆ.