ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ ಬಿ ಆರ್ ಸಿ ಮಂಜೇಶ್ವರ ಇದರ ಆಶ್ರಯದಲ್ಲಿ ಜಿ.ಎಚ್.ಎಸ್ ಕಡಂಬಾರು ಶಾಲೆಯಲ್ಲಿ ನಡೆದ ಲೈಫ್ 24 ಶಿಬಿರ ಇತ್ತೀಚೆಗೆ ಸಮಾರೋಪಗೊಂಡಿತು.
ಸೆ. 27 ರಿಂದ 29 ರ ವರೆಗೆ 3 ದಿನಗಳಲ್ಲಿ ನಡೆದ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳಾದ ಪುಟ್ಟು ತಯಾರಿ, ಕೃಷಿ ಹಾಗೂ ಪ್ಲಂಬಿಂಗ್ ಗೆ ಸಂಬಂಧ ಪಟ್ಟಂತಹ ಪ್ರಾಯೋಗಿಕ ಅನುಭವಗಳನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಮಂಜೇಶ್ವರ ಬಿ.ಆರ್.ಸಿ.ಯ ಪ್ರಕಾಶ್, ಮಿದುಲ, ದಿವ್ಯ ಮಕ್ಕಳಿಗೆ ಪುಟ್ಟು ತಯಾರಿ ಬಗ್ಗೆ ತಿಳಿಸಿಕೊಟ್ಟು, ಪ್ರಾತ್ಯಕ್ಷಿಕೆ ನಡೆಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಕೃಷಿ ಅಧಿಕಾರಿ ಅರುಣ್ ಪ್ರಸಾದ್ ಅರವರು ವಿದ್ಯಾರ್ಥಿಗಳಿಗೆ ಕೃಷಿಗೆ ಸಂಬಂಧಪಟ್ಟ ಸಮಗ್ರವಾದ ಮಾಹಿತಿಯನ್ನು ನೀಡಿದರು. ಹೈಡ್ರೋ ಪೋನಿಕ್ಸ್ ಕೃಷಿ ವಿಧಾನವನ್ನು ತಿಳಿಸಿದರು.
ಹೊಸಂಗಡಿ ಪ್ರಕಾಶ್ ಟ್ರೇಡರ್ಸ್ ನ ಮಾಲಕ ಬಾಲಸುಬ್ರಮಣ್ಯ ಅರವರು ಪ್ಲಂಬಿಂಗ್ ಗೆ ಸಂಬಂದಿಸಿ ಮಾಹಿತಿಯನ್ನು ನೀಡಿದರು. ಮಂಜೇಶ್ವರ ಉಪಜಿಲ್ಲೆಯ ವಿವಿಧ ಶಾಲೆಗಳ 9ನೇ ತರಗತಿಯ ಒಟ್ಟು 36 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು. ಮಕ್ಕಳು ಗಳಿಸಿದ ಉತ್ತಮ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಕೊನೆಯ ದಿನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ಜೀವನ ಕೌಶಲ್ಯಗಳ ಅಗತ್ಯತೆಯನ್ನು ತಿಳಿಸಿದರು. ಶಾಲೆಯ ಹಿರಿಯ ಅಧ್ಯಾಪಕ ಅಬೂಕ್ಕರ್, ರಾಜೇಶ್ ಕೊಡ್ಲಮೊಗರು, ಬಾಲಸುಬ್ರಮಣ್ಯ, ವಿಶೇಷ ಶಿಕ್ಷಕರಾದ ಪ್ರಕಾಶ್, ಮಿದುಲ ಶುಭ ಹಾರೈಸಿದರು. ಮಂಜೇಶ್ವರ ಬಿ.ಆರ್.ಸಿ.ಯ ಬಿ.ಪಿ.ಸಿ ಜಾಯ್ ಅವರು ಸ್ವಾಗತಿಸಿ, ಸಿ ಆರ್. ಸಿ ಸಂಯೋಜಕ ನಾರಾಯಣರಾಜ್ ವಂದಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಸಿ.ಆರ್.ಸಿ.ಸಿ ಸಂಯೋಜಕಿ ಮೋಹಿನಿ, ದಿವ್ಯ ಹಾಗೂ ಸ್ಪೆಷಲಿಸ್ಟ್ ಅದ್ಯಾಪಕ ವರದ ರಾಜ್ ರವರು ಉಪಸ್ಥಿತರಿದ್ದರು.