ಕಾಸರಗೋಡು: ಬೇಕಲ ಶೈಕ್ಷಣಿಕ ಉಪಜಿಲ್ಲಾ ಶಾಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ಸರ್ಗೋತ್ಸವಂ-24 ಕಾರ್ಯಕ್ರಮ ಬಾರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿತು. ಶಾಸಕ ಸಿ.ಎಚ್.ಕುಞಂಬು ಸಮಾರಂಭ ಉದ್ಘಾಟಿಸಿದರು.
ಖ್ಯಾತ ಸಾಹಿತಿ, ಸಾಮಾಜಿಕ ಹೋರಾಟಗಾರ ಅಂಬಿಕಾಸುತನ್ ಮಾಙËಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜ್ಞಾನದ ಮೊದಲ ಅಕ್ಷರಕ್ಕೆ ಸಾಕ್ಷಿಯಾಗಿರುವ ಬಾರಾ ಶಾಲೆಯ ಐವತ್ತನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡ ಅತಿಥಿಗಳು ಮಕ್ಕಳೊಂದಿಗೆ ಸಂವಾದ ನಡೆಸಿದ ಸಂತಸ ಹಂಚಿಕೊಂಡರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಕೆ.ವಿಜಯನ್, ಸನಿಲ್, ದೀಪಾ ಬಾಲಕೃಷ್ಣನ್, ಶ್ರೀಕುಮಾರ್ ಉಪಸ್ತಿತರಿದ್ದರು. ಮುಖ್ಯಶಿಕ್ಷಕ ಕೆ.ಶಂಕರನ್ ಸ್ವಾಗತಿಸಿದರು. ವಿದ್ಯಾರಂಗ ಉಪಜಿಲ್ಲಾ ಸಂಚಾಲಕಿ ರಮಾದೇವಿ ವಂದಿಸಿದರು.