ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯದ ನೇತೃತ್ವದಲ್ಲಿ 256ನೇ ಪ್ರತಿರುದ್ರ ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಂಗಳವಾರ ಜರಗಿತು. 2025ರಲ್ಲಿ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಈ ನಿಟ್ಟಿನಲ್ಲಿ ಪ್ರದೋಶ ಕಾಲದಲ್ಲಿ ರುದ್ರಪಠಣ ಮಾಡಲಾಯಿತು. ಅರ್ಚಕ ಗಣರಾಜ ಏತಡ್ಕ ಶ್ರೀದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರಮೂಲೆ, ವಲಯ ಅಧ್ಯಕ್ಷ ಪರಮೇಶ್ವರ ಪೆರುಮಂಡ, ಕಾರ್ಯದರ್ಶಿ ನಾರಾಯಣ ಮೂರ್ತಿ ಗುಣಾಜೆ, ಪ್ರತಿರುದ್ರ ಸಂಚಾಲಕ ಮೋಹನ ಕೋರಿಕ್ಕಾರು ಹಾಗೂ ವಲಯದ ವಿವಿಧ ಮನೆಗಳಿಂದ ರುದ್ರಪಾಠಕರು ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ. ಶಾಮ ಭಟ್ ಮನವಿ ಪತ್ರ, ಶಿವಾರ್ಪಣಂ ಯೋಜನೆಯಂತೆ ಕುಂಬಳ ತರಕಾರಿ ಗಿಡ ಹಾಗೂ ಶಿವ ಪಂಚಾಕ್ಷರಿ ಪುಸ್ತಕಗಳನ್ನು ರುದ್ರ ಪಾಠಕರಿಗೆ ವಿತರಿಸಿದರು.
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಯದಂತೆ 2014ರಿಂದ ಪಳ್ಳತ್ತಡ್ಕ ಹವ್ಯಕ ವಲಯದ ಪ್ರತಿ ಮನೆ ಮನೆಗಳಲ್ಲಿ ಪ್ರತಿರುದ್ರ ಕಾರ್ಯಕ್ರಮವನ್ನು ಪ್ರದೋಷ ಕಾಲದಲ್ಲಿ ಸಾಮೂಹಿಕವಾಗಿ ನಡೆಸುತ್ತಾ ಬರುತ್ತಿದ್ದೇವೆ.
- ಮೋಹನ ಕೋರಿಕ್ಕಾರು, ಪ್ರತಿ ರುದ್ರ ಸಂಚಾಲಕ