ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನೆ ಅ. 25 ಶುಕ್ರವಾಗ 11 ಕ್ಕೆ ನಡೆಯಲಿದೆ.ಕಾಸರಗೋಡು ಸಂಸದÀ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿರುವರು. ಸಮಾರಂಭದಲ್ಲಿ ನಿವೃತ್ತ ಡಿಡಿಇ ನಂದಿಕೇಶನ್ ಅವರನ್ನು ಗೌರವಿಸಲಾಗುವುದು. ಜಿಲ್ಲಾ ಪಂಚಾಯತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನ್ಯಾಯವಾದಿ. ಸರಿತ ಎಸ್ ಎನ್, ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನ ಟೀಚರ್, ಪುತ್ತಿಗೆ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಪುತ್ತಿಗೆ ಪಂಚಾಯತಿ ಸದಸ್ಯೆ ಅನಿತಾಶ್ರೀ, ನಬಾರ್ಡ್ ಡಿಡಿಎಂ ಶರೋನ್ ವಾಸ್, ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಮಧುಸೂದನನ್ ಟಿವಿ, ಜಿಲ್ಲಾ ಶಿಕ್ಷಣಾಧಿಕಾರಿ, ದಿನೇಶ ವಿ, ಕುಂಬಳೆ ಎಇಒ ಶಶಿಧರ ಎಂ, ಮಂಜೇಶ್ವರ ಎ ಇ ಒ ರಾಜಗೋಪಾಲ ಕೆ, ಕಾಸರಗೋಡು ಎಇಒ ಆಗಸ್ಟಿನ್ ಬರ್ನಾಡ್, ಕುಂಬಳೆ ಬಿಪಿಸಿ ಜಯರಾಮ ಜೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ಪಿ, ಮದರ್ ಪಿಟಿಎ ಅಧ್ಯಕ್ಷೆ ಆಶಿಯತ್ ಅಸೀದ ಎ ಎಂ, ಕಾಂಟ್ರಾಕ್ಟರ್ ಮೊಹಮ್ಮದ್ ಅಶ್ರಫ್, ಸಿಪಿಎಂ ವಲಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಅನಂತಪುರ, ಕಾಂಗ್ರೆಸ್ ಮಂಡಲಾಧ್ಯಕ್ಷ ಸುಲೈಮಾನ್ ಊಜಂಪದವು, ಮುಸ್ಲಿಂ ಲೀಗ್ ವಲಯ ಅಧ್ಯಕ್ಷ ಅಬ್ದುಲ್ಲ ಕಂಡತ್ತಿಲ ಶುಭಾಶಂಸನೆ ನೀಡುವರು. ಎಕ್ಸಿಕ್ಯೂಟಿವ್ ಎಂಜಿನಿಯರ್ ಸಜಿತ್ ಎಂ ವರದಿ ಮಂಡಿಸುವರು. ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತ ಎ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಕಿರಣ್ ಕೆ ಉಪಸ್ಥಿತರಿರುವರು.