HEALTH TIPS

ಬರಲಿದೆ ಲುಲು ಐಪಿಒ: 25 ಶೇ. ಷೇರುಗಳು ಸಾರ್ವಜನಿಕ ವಲಯಕ್ಕೆ: ಅಬುಧಾಬಿ ಎಕ್ಸ್ಚೇಂಜ್ ನಲ್ಲಿ ಲೀಸ್ಟ್

ದುಬೈ: ಮಧ್ಯಪ್ರಾಚ್ಯದ ಅತಿದೊಡ್ಡ ಹೈಪರ್‍ಮಾರ್ಕೆಟ್, ಕೇರಳ ಮೂಲದ ಸೂಪರ್‍ಮಾರ್ಕೆಟ್ ಸರಪಳಿಗಳಲ್ಲಿ ಒಂದಾದ ಲುಲು ರಿಟೇಲ್ ಹೋಲ್ಡಿಂಗ್ಸ್ ಆರಂಭಿಕ ಸಾರ್ವಜನಿಕ ಕೊಡುಗೆಗೆ ಸಜ್ಜಾಗಿದೆ. 25 ರಷ್ಟು ಕಂಪನಿಯ ಷೇರುಗಳನ್ನು ಮಾರಾಟ ಮಾಡಲು ಅದು ಸಜ್ಜುಗೊಂಡಿದೆ. 

ಐಪಿಒ ಅವಧಿಯು ಅಕ್ಟೋಬರ್ 28 ರಿಂದ ನವೆಂಬರ್ 5 ರವರೆಗೆ ಇರುತ್ತದೆ. ಈ ವೇಳೆ 258.2 ಕೋಟಿ ಷೇರುಗಳು ಮಾರಾಟವಾಗಲಿದೆ. ಪ್ರಮುಖ ಮಲಯಾಳಿ ಅನಿವಾಸಿ ಉದ್ಯಮಿ ಎಂಎ ಯೂಸಫಲಿ ಸ್ಥಾಪಿಸಿದ ಲುಲು, ಜಿಸಿಸಿ ದೇಶಗಳಲ್ಲಿ 260 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ ಮತ್ತು ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಅನೇಕ ಶಾಪಿಂಗ್ ಮಾಲ್‍ಗಳನ್ನು ಹೊಂದಿದೆ.

ಶೇ.10 ರಷ್ಟು ಷೇರುಗಳನ್ನು ಚಿಲ್ಲರೆ ಹೂಡಿಕೆದಾರರಿಗೆ ಕಾಯ್ದಿರಿಸಲಾಗುವುದು. ಮಾರಾಟವಾದ ಒಟ್ಟು ಷೇರುಗಳಲ್ಲಿ, 89 ಪ್ರತಿಶತವನ್ನು ಸಾಂಸ್ಥಿಕ ಹೂಡಿಕೆದಾರರಿಗೆ (ಕ್ಯೂಐಪಿ) ಮತ್ತು 1 ಪ್ರತಿಶತವನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ.

ಸೌದಿ ಅರೇಬಿಯಾದಲ್ಲಿ ವ್ಯಾಪಾರ ವಿಸ್ತರಣೆಯ ಭಾಗವಾಗಿ ಐಪಿ ಕರೆಯಲಾಗುತ್ತದೆ. ಈ ಷೇರು ನವೆಂಬರ್ 14 ರಂದು ಅಬುಧಾಬಿ ಸೆಕ್ಯುರಿಟೀಸ್ ಎಕ್ಸ್‍ಚೇಂಜ್‍ನಲ್ಲಿ ಲಿಸ್ಟ್ ಆಗುವ ನಿರೀಕ್ಷೆಯಿದೆ.

ಐಪಿ ಪ್ರಕ್ರಿಯೆಯು ಅಬುಧಾಬಿ ಕಮರ್ಷಿಯಲ್ ಬ್ಯಾಂಕ್, ಫಸ್ಟ್ ಅಬುಧಾಬಿ ಬ್ಯಾಂಕ್, ಎಮಿರೇಟ್ಸ್ ಎನ್.ಬಿ.ಡಿ. ಕ್ಯಾಪಿಟಲ್, ಎಚ್.ಎಸ್.ಬಿ.ಸಿ ಬ್ಯಾಂಕ್ ಮಿಡಲ್ ಈಸ್ಟ್ ಮತ್ತು ದುಬೈ ಇಸ್ಲಾಮಿಕ್ ಬ್ಯಾಂಕ್ ನೇತೃತ್ವದಲ್ಲಿ ನಡೆಯಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries