ಪತ್ತನಂತಿಟ್ಟ: ಶಬರಿಮಲೆಯಲ್ಲಿ ದರ್ಶನಕ್ಕೆ ಸ್ಪಾಟ್ ಬುಕ್ಕಿಂಗ್ ನಿಲ್ಲಿಸಿರುವ ದೇವಸ್ವಂ ಮಂಡಳಿ ಕ್ರಮವನ್ನು ವಿರೋಧಿಸಿ ಇದೇ 26ರಂದು ಪಂದಳಂನಲ್ಲಿ ಹಿಂದೂ ಸಂಘಟನೆಗಳ ಜಂಟಿ ಸಭೆ ನಡೆಯಲಿದೆ.
ಶಬರಿಮಲೆ ಯಾತ್ರೆಯಲ್ಲಿ ಸರ್ಕಾರ ಹಾಗೂ ದೇವಸ್ವಂ ಮಂಡಳಿ ತೋರುತ್ತಿರುವ ನಿರಾಸಕ್ತಿಯ ವಿರುದ್ಧ ಹಿಂದೂ ಸಂಘಟನೆಗಳು ಧರಣಿ ಆರಂಭಿಸಲು ನಿರ್ಧರಿಸಿವೆ. ಪ್ರತಿಭಟನಾ ಕಾರ್ಯಕ್ರಮಗಳ ಜತೆಗೆ ಜಾಗೃತಿ ಮೂಡಿಸಲಾಗುವುದು. ಆಚಾರ ಸಂರಕ್ಷಣಾ ಸಮಿತಿ, ಅಯ್ಯಪ್ಪ ಸೇವಾ ಸಂಘ, ಅಯ್ಯಪ್ಪ ಸೇವಾ ಸಮಾಜ ಮುಂತಾದ ಸಂಘಟನೆಗಳ ಮುಖಂಡರು ಜಂಟಿ ಸಭೆ ಕರೆದಿರುವರು.
ಇದರೊಂದಿಗೆ ಎಡಪಕ್ಷಗಳು ಕೂಡ ಸ್ಪಾಟ್ ಬುಕ್ಕಿಂಗ್ ಪುನರಾರಂಭಿಸುವಂತೆ ಒತ್ತಾಯಿಸಿವೆ. ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರೂ ಸ್ಪಾಟ್ ಬುಕ್ಕಿಂಗ್ ಗೆ ಆಗ್ರಹಿಸಿರುವರು. ರಾಜಕೀಯ ಲಾಭ ಪಡೆಯಲು ಬಿಜೆಪಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿರುವರು. ಸಿಪಿಎಂ ಪತ್ತನಂತಿಟ್ಟ ಜಿಲ್ಲಾ ಸಮಿತಿ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದೆ.