HEALTH TIPS

ಕುಂಬಳೆ ಉಪಜಿಲ್ಲಾ ಕೇರಳ ಶಾಲಾ ವಿಜ್ಞಾನೋತ್ಸವ ಅ. 28-29 ರಂದು ಕುಂಬಳೆಯಲ್ಲಿ

ಕುಂಬಳೆ: ಈ ವರ್ಷದ ಕುಂಬಳೆ ಉಪಜಿಲ್ಲಾ ಕೇರಳ ಶಾಲಾ ವಿಜ್ಞಾನೋತ್ಸವ ಅ. 28 ಮತ್ತು 29 ರಂದು (ಸೋಮವಾರ ಮತ್ತು ಮಂಗಳವಾರ) ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಕುಂಬಳೆ ಜಿಎಸ್ ಬಿಎಸ್ ಶಾಲೆಯಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿ ಕುಂಬಳೆ ಪ್ರೆಸ್ ಪೋರಂನಲ್ಲಿ ನಿನ್ನೆ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.. 

ಕುಂಬಳೆ ಉಪಜಿಲ್ಲೆಯ ಎಲ್‍ಪಿ, ಯುಪಿ, ಹೈಸ್ಕೂಲ್, ಹೈಯರ್ ಸೆಕೆಂಡರಿ ಸೇರಿದಂತೆ 88 ಶಾಲೆಗಳ ಸುಮಾರು 6,000 ವಿದ್ಯಾರ್ಥಿಗಳು ಎರಡು ದಿನಗಳ ಕಾಲ ನಡೆಯುವ ವಿಜ್ಞಾನ ಹಬ್ಬದಲ್ಲಿ ಪಾಲ್ಗೊಳ್ಳುವರು. ಮೊದಲ ದಿನ ವಿಜ್ಞಾನ ಮತ್ತು ಗಣಿತ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎರಡನೇ ದಿನ ಸಮಾಜ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಕೆಲಸದ ಅನುಭವ (ವರ್ಕ್ ಎಸ್ಪೀರಿಯನ್ಸ್)ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಅಕ್ಟೋಬರ್ 28 ರ ಸೋಮವಾರ ಬೆಳಿಗ್ಗೆ 9 ಕ್ಕೆ ವಿಜ್ಞಾನೋತ್ಸವ ಪ್ರಾರಂಭವಾಗಲಿದ್ದು, ಘಟಕ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಕುಂಬಳೆ ಜಿಎಚ್‍ಎಸ್‍ಎಸ್ ಪ್ರಾಂಶುಪಾಲ ರವಿ ಮುಲ್ಲಚೇರಿ ಅವರು ಧ್ವಜಾರೋಹಣಗೈದು ಚಾಲನೆ ನೀಡುವರು. ಬಳಿಕ ಉದ್ಘಾಟನಾ ಸಭೆ ನಡೆಯಲಿದ್ದು, ಸಂಸದ ರಾಜಮೋಹನ್ ಉಣ್ಣಿತ್ತಾನ್ ಔಪಚಾರಿಕವಾಗಿ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. 

ಶಾಸಕ ಎ ಕೆ ಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ನ್ಯಾಯವಾದಿ ಸಿ ಹೆಚ್ ಕುಂಞಂಬು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ.ಶೈಮಾ, ಜಿಲ್ಲಾ ಪಂಚಾಯತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎನ್.ಸರಿತಾ, ಕಾರಡ್ಕ  ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಕುಂಬಳೆ, ಬಿ.ಶಾಂತ ಬದಿಯಡ್ಕ, ಸೋಮಶೇಖರ ಜೆ.ಎಸ್., ಸುಬ್ಬಣ್ಣ ಆಳ್ವ, ಪೆÇಸಳಿಕೆ, ಶ್ರೀಧರ ಬೆಳ್ಳೂರು, ಗೋಪಾಲ ಕೃಷ್ಣ ಕಾರಡ್ಕ, ನ್ಯಾಯವಾದಿ. ಉಷಾ ದೇಲಂಪಾಡಿ, ಕಣ್ಣೂರು ಆರ್‍ಡಿಒ ರಾಜೇಶ್ ಕುಮಾರ್, ಜಿಲ್ಲಾ ಶಿಕ್ಷಣ ನಿರ್ದೇಶಕ ಮಧುಸೂದನನ್ ಟಿ.ವಿ, ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ ವಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದಿಕ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಕುಂಬಳೆ ಪಂಚಾಯಿತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆÀ ನಸೀಮಾ ಖಾಲಿದ್, ಸಬೂರ ಎಂ, ಬಿ.ಎ.ರಹಮಾನ್ ಆರಿಕ್ಕಾಡಿ, ಬ್ಲಾಕ್ ಪಂಚಾಯತಿ ಸದಸ್ಯೆ ಪ್ರೇಮಾ ಶೆಟ್ಟಿ, ಪಂಚಾಯತಿ ಸದಸ್ಯೆ ಪ್ರೇಮಾವತಿ, ಪಿಟಿಎ ಅಧ್ಯಕ್ಷರುಗಳಾದ ಎ.ಕೆ.ಆರೀಫ್, ಪ್ರಸಾದ್ ಕುಮಾರ್, ಕೈಟ್ ಸಂಯೋಜಕ ರೋಜಿ ಜೋಸೆಫ್, ಅನಿಲ್ ಕುಮಾರ್ ಮಣಿಯಂಪಾರೆ ಡಯಟ್, ಜಯನ್ ಬಿಪಿಸಿ, ಶ್ರೀಹರ್ಷನ್ ಪಿಇಸಿ ಕಾರ್ಯದರ್ಶಿ ವಿಷ್ಣು,  ಮೊದಲಾದವರು ಉಪಸ್ಥಿತರಿರುವರು. 

29 ರಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕುಂಬಳೆ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಕುಂಬಳೆ  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸುವರು. ಪ್ರಮುಖ ಕೈಗಾರಿಕೋದ್ಯಮಿ ಕೆ.ಕೆ.ಶೆಟ್ಟಿ, ಕುಂಬಳೆ ಠಾಣಾ ಸಿ.ಐ ವಿನೋದ್ ಕುಮಾರ್, ಪಂಚಾಯಿತಿ ಸದಸ್ಯರಾದ ಯೂಸುಫ್ ಉಳುವಾರ್, ವಿವೇಕಾನಂದ ಶೆಟ್ಟಿ, ಶೋಭಾ, ಮೊಯ್ದೀನ್ ಅಜೀಜ್, ರತ್ನಾಕರನ್, ಅಶ್ರಫ್ ಕೊಡ್ಯಮೆ, ಟಿಕೆ ಜಾಫರ್, ಸುರೇಶ್ ಕೆ, ಗಣೇಶ್, ಮದಸೂಧನನ್ ಎಂ, ಬಾಬು ಸಿದ್ದಿಬೈಲ್, ಪುಷ್ಪಂತ್ ಕೆ, ಗಿರೀಶ್ ಎಂಪಿ, ರಾಧಾಕೃಷ್ಣನ್ ಪಿಎ, ಗುರುಪ್ರಸಾದ್, ಸೋಮನಾಥ ಎಂ, ಪ್ರದೀಪ್ ಕುಮಾರ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸಲಿರುವರು.

ವಿಜ್ಞಾನೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಘಟನಾ ಸಮಿತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಪ್ರಧಾನ ಸಂಚಾಲಕ ರವಿಮುಲ್ಲಚೇರಿ ಕಾರ್ಯಾಧ್ಯಕ್ಷ ವಿಜಯ ಕುಮಾರ್, ಅಶ್ರಫ್ ಕಾರ್ಲೆ, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎ.ರಹಮಾನ್ ಆರಿಕ್ಕಾಡಿ, ಪಿಟಿಎ ಅಧ್ಯಕ್ಷ ಎ.ಕೆ.ಆರಿಫ್, ಪ್ರಸಾದ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries