ಮಿಲಾನ್: ಅಪರೂಪದ ಆನುವಂಶಿಕ ಕಾಯಿಲೆ 'ಪ್ರೊಗೇರಿಯಾ'ದಿಂದ ಬಳಲುತ್ತಿದ್ದರೂ 28 ವರ್ಷ ಬದುಕಿದ್ದ ಸ್ಯಾಮಿ ಬಸ್ಸೋ ಅವರು ನಿಧನರಾಗಿದ್ದಾರೆ ಎಂದು ಇಟಲಿಯನ್ ಪ್ರೊಗೇರಿಯಾ ಅಸೋಸಿಯೇಷನ್ ಭಾನುವಾರ ತಿಳಿಸಿದೆ.
ಮಿಲಾನ್: ಅಪರೂಪದ ಆನುವಂಶಿಕ ಕಾಯಿಲೆ 'ಪ್ರೊಗೇರಿಯಾ'ದಿಂದ ಬಳಲುತ್ತಿದ್ದರೂ 28 ವರ್ಷ ಬದುಕಿದ್ದ ಸ್ಯಾಮಿ ಬಸ್ಸೋ ಅವರು ನಿಧನರಾಗಿದ್ದಾರೆ ಎಂದು ಇಟಲಿಯನ್ ಪ್ರೊಗೇರಿಯಾ ಅಸೋಸಿಯೇಷನ್ ಭಾನುವಾರ ತಿಳಿಸಿದೆ.
ಹಚಿನ್‌ಸನ್-ಗಿಲ್ಫರ್ಡ್ ಸಿಂಡ್ರೋಮ್ (ಎಚ್‌ಗಿಪಿಎಸ್) ಎಂದೂ ಕರೆಯಲಾಗುವ ಪ್ರೊಗೇರಿಯಾ ಇದ್ದ ಯಾವುದೇ ವ್ಯಕ್ತಿಯು ವಾಸ್ತವ ವಯಸ್ಸಿಗಿಂತ ತುಂಬಾ ದೊಡ್ಡವರಂತೆ ಕಾಣಿಸಿಕೊಳ್ಳುತ್ತಾರೆ.
ವಿಶ್ವದಾದ್ಯಂತ 2 ಕೋಟಿ ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಪ್ರಪಂಚದಾದ್ಯಂತ ಒಟ್ಟು 130 ಹಾಗೂ ಇಟಲಿಯಲ್ಲಿ 4 ಪ್ರೊಗೇರಿಯಾ ಪ್ರಕರಣಗಳು ಪತ್ತೆಯಾಗಿವೆ.
ಉತ್ತರ ಇಟಲಿಯ ವೆನೆಟೊ ಪ್ರಾಂತ್ಯದ ಚಿಯೊದಲ್ಲಿ 1995ರಲ್ಲಿ ಜನಿಸಿದ ಸ್ಯಾಮಿ ಬಸ್ಸೋ ಅವರಿಗೆ 2 ವರ್ಷ ಇದ್ದಾಗ ಪ್ರೊಗೇರಿಯಾ ಕಾಣಿಸಿಕೊಂಡಿತ್ತು. ಅವರ ಪೋಷಕರು 2005ರಲ್ಲಿ ಇಟಲಿಯನ್ ಪ್ರೊಗೇರಿಯಾ ಅಸೋಸಿಯೇಷನ್ ಸ್ಥಾಪಿಸಿದ್ದರು.
ಸ್ಯಾಮಿ ಬಸ್ಸೋ ಕುರಿತ 'ಸ್ಯಾಮಿ'ಸ್ ಜರ್ನಿ' ಸಾಕ್ಷ್ಯಚಿತ್ರ ನ್ಯಾಷನಲ್ ಜಿಯೋಗ್ರಾಫಿಕ್‌ನಲ್ಲಿ ಪ್ರಸಾರವಾಗಿತ್ತು.
'ನಮ್ಮ ಬೆಳಕು, ನಮ್ಮ ಮಾರ್ಗದರ್ಶಿ ಇಂದು ಕೊನೆಯುಸಿರೆಳೆದಿದ್ದಾರೆ. ನಮನ್ನೂ ಈ ಸುಂದರ ಬದುಕಿನ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು ಸ್ಯಾಮಿ' ಎಂದು ಇಟಲಿಯನ್ ಪ್ರೊಗೇರಿಯಾ ಅಸೋಸಿಯೇಷನ್ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದೆ.