HEALTH TIPS

ಅಲಪ್ಪುಳದಲ್ಲಿ ರಾಜ್ಯದ ಮೊದಲ ಟ್ರಾನ್ಸಿಟ್ ಹೋಮ್ 28 ರಂದು ಉದ್ಘಾಟನೆ: ಮಹಿಳೆಯರು ಮತ್ತು ಮಕ್ಕಳಿಗೆ ಮೊದಲ ಟ್ರಾನ್ಸಿಟ್ ಹೋಮ್

ಆಲಪ್ಪುಳ: ಅನಧಿಕೃತವಾಗಿ ರಾಜ್ಯ ಪ್ರವೇಶಿಸುವ ವಿದೇಶಿ ಮಹಿಳೆಯರು ಮತ್ತು ಮಕ್ಕಳ ಪುನರ್ ವಸತಿಗಾಗಿ ಆಲಪ್ಪುಳ ನಿರ್ಮಿಸಿರುವ ರಾಜ್ಯದ ಮೊದಲ ಟ್ರಾನ್ಸಿಸ್ಟ್ ಹೋಂ ನ್ನು 28 ರಂದು ವಲಿಯಾಕುಳಂನಲ್ಲಿ  ಸಚಿವೆ ಡಾ.ಆರ್. ಬಿಂದು ಉದ್ಘಾಟಿಸುವರು. ಟ್ರಾನ್ಸಿಟ್ ಹೋಮ್ ಎನ್ನುವುದು ಸಾಮಾಜಿಕ ನ್ಯಾಯ ಇಲಾಖೆಯಡಿಯಲ್ಲಿ ಕಾನೂನುಬಾಹಿರವಾಗಿ ಆಗಮಿಸುವವರಿಗೆ, ಪಾಸ್‍ಪೋರ್ಟ್ ಮತ್ತು ವೀಸಾ ಅವಧಿ ಮುಗಿದ ನಂತರ ಇಲ್ಲಿಯೇ ಇರುವವರಿಗೆ ಮತ್ತು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಇತರ ಮಾರ್ಗಗಳಲ್ಲಿ ರಕ್ಷಣೆ ಪಡೆಯಲು ಇರುವ ವ್ಯವಸ್ಥೆಯಾಗಿದೆ.

ಕೊಲ್ಲಂನಲ್ಲಿ ಪುರುಷರಿಗಾಗಿ ಟ್ರಾನ್ಸಿಟ್ ಹೋಮ್ ಕಾರ್ಯನಿರ್ವಹಿಸುತ್ತಿದೆ. ಅಲಪ್ಪುಳ ನಗರ ವ್ಯಾಪ್ತಿಯ ವಲಿಯಕುಳಂನಲ್ಲಿರುವ ಕಟ್ಟಡವನ್ನು ನವೀಕರಿಸಲಾಗಿದೆ ಮತ್ತು ಟ್ರಾನ್ಸಿಟ್ ಹೋಮ್‍ಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನಿರ್ಮಿತಿ ಕೇಂದ್ರದ ಮೂಲಕ 10 ಲಕ್ಷ ರೂ.ವೆಚ್ಚದಲ್ಲಿ ನವೀಕರಣ ಕಾಮಗಾರಿ ಪೂರ್ಣಗೊಂಡಿದೆ. ಟ್ರಾನ್ಸಿಟ್ ಹೋಮ್ ಮ್ಯಾನೇಜರ್‍ನ ಕರ್ತವ್ಯಗಳನ್ನು ನಿರ್ವಹಿಸಲು ಪ್ರಬೇಷನ್ ಅಧಿಕಾರಿಗಳನ್ನೂ ನೇಮಿಸಲಾಗಿದೆ.

ಸೌಲಭ್ಯದ ಭದ್ರತೆಯು ಟ್ರಾನ್ಸಿಟ್ ಹೋಮ್ ಪೆÇೀಲೀಸರ ನಿರ್ದೇಶನದಲ್ಲಿರಲಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧ್ಯಕ್ಷತೆಯ ಎಂಟು ಸದಸ್ಯರ ಜಿಲ್ಲಾ ಮೌಲ್ಯಮಾಪನ ಸಮಿತಿಯು ಟ್ರಾನ್ಸಿಟ್ ಹೋಮ್‍ನ ಕಾರ್ಯನಿರ್ವಹಣೆ ಮತ್ತು ನಿರ್ವಹಣೆಯನ್ನು ಮೌಲ್ಯಮಾಪನ ಮಾಡುವುದು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಾಗ, ಎಲ್ಲಾ ರಾಜ್ಯಗಳಲ್ಲಿ ಇಂತಹ ಟ್ರಾನ್ಸಿಟ್ ಹೋಮ್‍ಗಳನ್ನು ಜಾರಿಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರರು ಕೇರಳದಲ್ಲಿ ಯಾವುದೇ ಇಂತಹ ಶಿಬಿರಗಳನ್ನು ಸ್ಥಾಪಿಸುವುದಿಲ್ಲ ಎಂದು ಘಃಓಷಿಸಿದ್ದರು. ಬಳಿಕ ಕೇಂದ್ರದ ಕಡ್ಡಾಯ ಒತ್ತಡದಿಂದ ನಿರ್ಮಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries