ಬದಿಯಡ್ಕ: ಕೇಂದ್ರ ಸರ್ಕಾರದ ಜನಸುರಕ್ಷಾ ಯೋಜನೆಯ ಪ್ರಯೋಜನದ ಬಗ್ಗೆ ನಾಗರಿಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖೆಯ ನೇತೃತ್ವದಲ್ಲಿ ಜನಸುರಕ್ಷಾ ಯೋಜನೆ ಮಾಹಿತಿ ಅಭಿಯಾನ ಅಕ್ಟೋಬರ್ 28ರಂದು ಸೋಮವಾರ ಸಂಜೆ 4 ಕ್ಕೆ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ನಡೆಯಲಿರುವುದು. ಗ್ರಾಮೀಣ ಬ್ಯಾಂಕ್ ಸ್ಥಾನೀಯ ಪ್ರಬಂಧಕ ಶ್ರೀಲತ ವರ್ಮ ಅಧ್ಯಕ್ಷತೆ ವಹಿಸುವರು.
ಕಾಸರಗೋಡು ಎಲ್‍ಡಿಎಮ್ ತಿಪ್ಪೇಶ್ ಎಲ್., ನಬಾರ್ಡ್ ಡಿಡಿಎಂ ಶಾರೋಣ್‍ವಾಸ್, ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತ ಬಿ., ಉಪಾಧ್ಯಕ್ಷ ಎಂ. ಅಬ್ಬಾಸ್, ಬ್ಯಾಂಕಿಂಗ್ ಮಾಹಿತಿ ತಜ್ಞ ದೇವದಾಸ್ ಬಿ. ಪಾಲ್ಗೊಳ್ಳಲಿದ್ದಾರೆ. ಮಂಜೇಶ್ವರ ಬ್ಲಾಕ್ ಎಫ್‍ಎಲ್‍ಸಿ ಸುಬ್ರಹ್ಮಣ್ಯ ಶೆಣೈ, ಬದಿಯಡ್ಕ ಶಾಖಾ ಪ್ರಬಂಧಕ ಈಶ್ವರ ಕೆ.ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಎಲ್ಲಾ ನಾಗರಿಕರೂ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬೇಕಾಗಿ ಬದಿಯಡ್ಕ ಶಾಖೆಯ ವತಿಯಿಂದ ತಿಳಿಸಲಾಗಿದೆ.