ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ವತಿಯಿಂದ ಕಾಸರಗೋಡಿನ ಕನ್ನಡದ ಹೋರಾಟಗಾರ, ಕವಿ, ಪತ್ರಕರ್ತ ದಿ. ಎಂ ಗಂಗಾಧರ ಭಟ್ ಸಮಸ್ಮರಣಾ ಸಮಾರಂಭ ಅ. 28ರಂದು ಸಂಜೆ 3.30ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ರಂಗ ಚಿನ್ನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಕೋಳಾರು ಅಧ್ಯಕ್ಷತೆ ವಹಿಸುವರು. ವಕೀಲ ಎ. ಬಾಲಕೃಷ್ಣನ್ ನಾಯರ್, ರಂಗ ಕರ್ಮಿ ಬಿ.ರಾಮ ಮೂರ್ತಿ, ಕವಯತ್ರಿ ವಇಜಯಲಕ್ಷ್ಮೀ ಶ್ಯಾನುಭಾಗ್ ಸಂಸ್ಮರಣಾ ಮಾತುಗಳನ್ನಾಡುವರು. ರಂಗಚಿನ್ನಾರಿ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡುವರು.