ಕಾಸರಗೋಡು : ಕುಂಬಳೆ ಸನಿಹದ ಅನಂತಪುರ ಕೈಗಾರಿಕಾ ಅಭಿವೃದ್ಧಿ ಪ್ರಾಂಗಣದಲ್ಲಿ ಆರಂಬಿಸಲಾಗಿರುವ ಜಿಲ್ಲೆಯ ಅತಿ ದೊಡ್ಡ ಹಾಗೂ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅ. 29ರಂದು ಬೆಳಗ್ಗೆ 9ಕ್ಕೆ ರಾಜ್ಯ ಕೈಗಾರಿಕಾ ಖಾತೆ ಸಚಿವ ಪಿ.ರಾಜೀವ್ ಉದ್ಘಾಟಿಸಲಿದ್ದಾರೆ ಎಂದು ಗ್ರೀನ್ ವಮ್ರ್ಸ್ ಸಮಸ್ಥೆ ನಿರ್ದೇಶಕ ಸಿ.ಕೆ ಶಮೀರ್ ಬಾವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಇನ್ಬಾಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹಸಿರು ಕ್ರಿಯಾಸೇನೆ ಸಂಗ್ರಹಿಸುವ ಅಜೈವಿಕ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವ ಘಟಕ ಇದಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲಾಗಿರುವ ಈ ಸೌಲಭ್ಯವು ವರ್ಷಕ್ಕೆ 10,000 ಮೆಟ್ರಿಕ್ ಟನ್ ಅಜೈವಿಕ ತ್ಯಾಜ್ಯವನ್ನು ಸಂಸ್ಕರಿಸಬಹುದಾಗಿದೆ. ಜಿಲ್ಲೆಯ 41 ಸ್ಥಳೀಯಾಡಳಿತ ಸಂಸ್ಥೆಗಳಿಂದ ಸಂಗ್ರಹಿಸಿದ ಎಲ್ಲಾ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುವುದು. ಜಿಲ್ಲೆಯಲ್ಲಿ ಸಂಗ್ರಹವಾಗುವ ಎಲ್ಲಾ ಅಜೈವಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ವ್ಯವಸ್ಥೆ ಇದೇ ಮೊದಲ ಬಾರಿಗೆ ನಿರ್ಮಿಸಲಾಗಿದ್ದು, 70 ಮಂದಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ಲಭ್ಯವಾಗಲಿದೆ.
ಗ್ರೀನ್ ವಮ್ರ್ಸ್ ಸಂಸ್ಥೆ ಕೇರಳದಲಿ ್ಲಕೊಚ್ಚಿನ್ ಮತ್ತು ತಿರುವನಂತಪುರಂ ಕಾಪೆರ್Çರೇಷನ್ ಸೇರಿದಂತೆ 128 ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು 5000 ಮೆಟ್ರಿಕ್ ಟನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಸೀನಿಯರ್ ಆಪರೇಷನ್ ಮ್ಯಾನೇಜರ್ ಶ್ರೀರಾಗ್ ಕುರುವಾಟ್ ಮತ್ತು ಯೋಜನಾ ಸಂಯೋಜಕ ಶಾಕಿರ್ ನಿಹಾಲ್ ಸಿ.ಕೆ ಉಪಸ್ಥಿತರಿದ್ದರು.