ಬರೇಲಿ: 16 ವರ್ಷದಿಂದ ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ 21 ವರ್ಷದ ಯುವತಿಯ ಹೊಟ್ಟೆಯಿಂದ 2 ಕೆ.ಜಿ ಕೂದಲು ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
'ವೈದ್ಯಕೀಯವಾಗಿ ಈ ಸ್ಥಿತಿಯನ್ನು ಟ್ರೈಕೊಫೇಜಿಯಾ ಅಥವಾ ರಾಪುಂಜೆಲ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
'ಸಿಟಿ ಸ್ಕ್ಯಾನ್ ವೇಳೆ ಕೂದಲು ಗಡ್ಡೆ ಪತ್ತೆಯಾಗಿದ್ದು, ಯುವತಿಯನ್ನು ಆಪ್ತಸಮಾಲೋಚನೆಗೆ ಒಳಪಡಿಸಲಾಯಿತು. ಈ ವೇಳೆ ಐದನೇ ವಯಸ್ಸಿನಿಂದ ಕೂದಲು ತಿನ್ನುತ್ತಿರುವುದಾಗಿ ಯುವತಿ ತಿಳಿಸಿದ್ದಳು' ಎಂದರು.
'ಕೂದಲು ಆಕೆಯ ಹೊಟ್ಟೆಯ ಕುಳಿಯಲ್ಲಿ ತುಂಬಿಕೊಂಡಿದ್ದು, ಕರುಳಿನ ಭಾಗಗಳಿಗೂ ಹರಡಿತ್ತು' ಎಂದು ಹೇಳಿದರು.
ಸೆಪ್ಟೆಂಬರ್ 26ರಂದು ಶಸ್ತ್ರಚಿಕಿತ್ಸೆ ನಡೆಸಿ 2 ಕೆ.ಜಿ ಕೂದಲು ಗಡ್ಡೆಯನ್ನು ಹೊರತೆಗೆಯಲಾಯಿತು ಎಂದು ತಿಳಿಸಿದರು.