ಅಮೇಠಿ: ಸಂಸ್ಕರಿತ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಸಿದ್ಧಪಡಿಸಿದ ಪೇವರ್ಸ್‌ಗಳಿಂದ ಉತ್ತರ ಪ್ರದೇಶದ ಅಮೇಠಿ ಜಿಲ್ಲಾಡಳಿತವು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 30 ಕಿ.ಮೀ. ರಸ್ತೆ ನಿರ್ಮಿಸಿದೆ. ಇದರಿಂದ ₹45 ಲಕ್ಷ ಉಳಿತಾಯವಾಗಿದೆ ಎಂದು ತಿಳಿಸಿದೆ.

ಸಂಸ್ಕರಿತ ಪ್ಲಾಸ್ಟಿಕ್ ತ್ಯಾಜ್ಯಗಳು ನಿರ್ಮಾಣ ಸಾಮಗ್ರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಪರಿಸರವನ್ನು ರಕ್ಷಿಸಲು ಸಹಾಯ ಮಾಡಬಹುದು ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.
ಬಿಟುಮಿನ್ ಜತೆಗೆ ಶೇ 8ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ರಸ್ತೆಗಳ ದೃಢತೆ ಹೆಚ್ಚುತ್ತದೆ. ಅಲ್ಲದೆ ರಸ್ತೆ ಮೇಲೆ ನೀರು ನಿಲ್ಲುವುದನ್ನು ಪ್ಲಾಸ್ಟಿಕ್ ತಡೆಯಲಿದೆ. ಇದರಿಂದ ಬಿಟುಮಿನ್ ಹಾಳಾಗುವುದನ್ನು ತಪ್ಪಿಸಿ, ರಸ್ತೆ ಉತ್ತಮ ಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ.
ಪ್ಲಾಸ್ಟಿಕ್ ಬಳಕೆ ಮಾಡಿರುವುದರಿಂದ ಒಂದು ಕಿಲೋ ಮೀಟರ್‌ಗೆ ₹1.5 ಲಕ್ಷ ಹಣ ಉಳಿತಾಯವಾಗಿದ್ದು, ಒಟ್ಟು 30 ಕಿ. ಮೀ. ಗೆ ₹45 ಲಕ್ಷ ಹಣ ಉಳಿಸಿದಂತಾಗಿದೆ. ತ್ಯಾಜ್ಯ ನಿರ್ವಹಣಾ ಘಟಕಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆಗೆ ಬರುವಂತೆ ಮಾಡಲು ಎಲ್ಲಾ ನಾಲ್ಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಮೇಠಿ ಜಿಲ್ಲಾಡಳಿತ ಹೇಳಿದೆ.