ಪೆರ್ಲ: ಕಲಿಯುಗದ ಕಲ್ಪತರು ಎಂದೇ ವಿಶೇಷಣಗಳಿಂದ ಉಲ್ಲೇಖಿಸಲ್ಪಡುವ ಸರ್ವಾಭಿಷ್ಠ ಸಿದ್ಧಿಪ್ರದವಾದ ಶಿವಾರಾಧನೆಯ ಮಹತ್ವ ಸಾರುವ ಶ್ರೀವರದ ಶಂಕರ ವ್ರತ ಪೂಜೆಯನ್ನು ಅ. 31ರಂದು ಮೊಗೇರು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಆರ್.ಎಸ್.ಬಿ.ಯುವ ಸಂಘ ಮೊಗೇರು ಇದರ ಆಶ್ರಯದಲ್ಲಿ ವೇದಮೂರ್ತಿ ಬಾಲಕೃಷ್ಣ ಭಟ್ ಪಾಲೆಚ್ಚಾರ್ ಅವರ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ವರದ ಶಂಕರ ವ್ರತ ಹಾಗೂ ಶ್ರೀ ದೇವಿಗೆ ವಿಶೇಷ ರಂಗಪೂಜೆ ದೀಪಾಲಂಕಾರ ಸೇವೆ ಜರಗಲಿದೆ. ಇದರ ಅಂಗವಾಗಿ ಅಂದು ಬೆಳಗ್ಗೆ 8 ಕ್ಕೆ ಕ್ಷೇತ್ರದಲ್ಲಿ ಗಣಪತಿ ಹವನ, ಮಧ್ಯಾಹ್ನ 3 ಕ್ಕೆ ಶ್ರೀವರದ ಶಂಕರ ವ್ರತ ಪೂಜಾರಂಭ, ಸಂಜೆ 4.30ಕ್ಕೆ ಶ್ರೀಸಚ್ಚಿದಾನಂದ ಭಟ್ ಮೊಗೇರು ಅವರಿಂದ ಕಥಾ ನಿರೂಪಣೆ ರಾತ್ರಿ 6 ಕ್ಕೆ ಮಂಗಳಾರತಿ ಪ್ರಸಾದ ವಿತರಣೆ, ರಾತ್ರಿ 7ರಿಂದ ವಿಶೇಷ ದೀಪಾಲಂಕರ ಶ್ರೀದೇವಿಗೆ ರಂಗಪೂಜೆ, ಪ್ರಸಾದ ವಿತರಣೆ ಜರಗಲಿದೆ.