ನವದೆಹಲಿ: ಕಡಲ ಗಡಿಯಲ್ಲಿ ಕಣ್ಗಾವಲಿಡಲು ಬಳಕೆಯಾಗುವ ಶಸ್ತ್ರಸಜ್ಜಿತ 'ಎಂಕ್ಯೂ 9ಬಿ' ಹೆಸರಿನ 31 ಡ್ರೋನ್‌ಗಳನ್ನು ಖರೀದಿಸಲು ಅಮೆರಿಕದ ಜತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದನ್ನು 'ಪ್ರಿಡೇಟರ್' ಎಂದೂ ಕರೆಯಲಾಗುತ್ತದೆ.
ನವದೆಹಲಿ: ಕಡಲ ಗಡಿಯಲ್ಲಿ ಕಣ್ಗಾವಲಿಡಲು ಬಳಕೆಯಾಗುವ ಶಸ್ತ್ರಸಜ್ಜಿತ 'ಎಂಕ್ಯೂ 9ಬಿ' ಹೆಸರಿನ 31 ಡ್ರೋನ್‌ಗಳನ್ನು ಖರೀದಿಸಲು ಅಮೆರಿಕದ ಜತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದನ್ನು 'ಪ್ರಿಡೇಟರ್' ಎಂದೂ ಕರೆಯಲಾಗುತ್ತದೆ.
ನ್ಯಾಟೊ ಸಮೂಹ ಹೊರತುಪಡಿಸಿ ಅಮೆರಿಕದಿಂದ ಇಂತಹ ಶಸ್ತ್ರಾಸ್ತ್ರ ಪಡೆಯುತ್ತಿರುವ ಮೊದಲ ರಾಷ್ಟ್ರ ಭಾರತವಾಗಲಿದೆ.
ಅಮೆರಿಕ ನಿರ್ಮಿತ 31 ಡ್ರೋನ್‌ಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ಅಕ್ಟೋಬರ್ 9ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಭದ್ರತೆಯ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಅನುಮೋದನೆ ನೀಡಿತ್ತು.
ಇದಕ್ಕೂ ಮುನ್ನ 2023ರ ಜೂನ್ 15ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಶಸ್ತ್ರಸಜ್ಜಿತ 'ಎಂಕ್ಯೂ 9ಬಿ' ಹೆಸರಿನ 30 ಡ್ರೋನ್ ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.