ಅಂಕಾರ: ಸಮೀಪದ ವಾಯುನೆಲೆ ಕೈಗಾರಿಕಾ ಪ್ರದೇಶದ ಮೇಲೆ ದಾಳಿ ನಡೆದ ಬಳಿಕ, ಇರಾಕ್ ಹಾಗೂ ಸಿರಿಯಾದಲ್ಲಿ ಕುರ್ದಿಶ್ ಉಗ್ರರ ಮೇಲೆ ಬುಧವಾರ ದಾಳಿ ನಡೆಸಿರುವುದಾಗಿ ಟರ್ಕಿ ಹೇಳಿದೆ.
ದೇಶಭ್ರಷ್ಟ ಕುರ್ದಿಸ್ತಾನ್ ವರ್ಕರ್ಸ್ ಪಕ್ಷವು (ಪಿಕೆಕೆ) ಕೈಗಾರಿಕಾ ಪ್ರದೇಶದ ಮೇಲೆ ನಡೆಸಿರುವ ಸಾಧ್ಯತೆ ಇದೆ.
ಇದಾದ ಸ್ವಲ್ಪ ಹೊತ್ತಿನ ನಂತರ, 'ಕುರ್ದಿಶ್ ಉಗ್ರರನ್ನು ಗುರಿಯಾಗಿಸಿ ಉತ್ತರ ಇರಾಕ್ ಮತ್ತು ಸಿರಿಯಾ ಮೇಲೆ ವಾಯುದಾಳಿ ನಡೆಸಲಾಗಿದೆ' ಎಂದು ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
'ಉಗ್ರರ 32 ನೆಲೆಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದ್ದೇವೆ' ಎಂದಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದೂ ತಿಳಿಸಿದೆ.
ಟರ್ಕಿ ವಿರುದ್ಧ ದಶಕದ ಕಾಲದಿಂದಲೂ ಬಂಡಾಯ ಸಾರಿರುವ ಪಿಕೆಕೆ ಅನ್ನು, ಟರ್ಕಿ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಉಗ್ರರ ಪಟ್ಟಿಗೆ ಸೇರಿಸಿವೆ. ಇರಾಕ್ ಮತ್ತು ಸಿರಿಯಾ ಕುರ್ದಿಶ್ ಪ್ರದೇಶದಲ್ಲಿ ನೆಲೆಗಳನ್ನು ಹೊಂದಿದೆ.
ಅಂಕಾರದಿಂದ 40 ಕಿ.ಮೀ. ದೂರವಿರುವ ಕಹರ್ಮಾನ್‌ಕಜಾನ್‌ನಲ್ಲಿ ಇರುವ ವಾಯುನೆಲೆ ಕೈಗಾರಿಕಾ ಕಂಪನಿಯ ಘಟಕದ (ಟಿಎಐ) ಮೇಲೆ ಇಬ್ಬರು ಬಂದೂಕುಧಾರಿಗಳು ಸಂಜೆ 4ರ ಸುಮಾರಿಗೆ ದಾಳಿ ನಡೆಸಿದ್ದರು. ಇದರಿಂದಾಗಿ, ಈ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು.
ಮೇಯರ್ ಅಲಿ ಯೆರ್ಲಿಕಾಯಾ ಅವರು ಕೂಡಲೇ 'ಇದೊಂದು ಭಯೋತ್ಪಾದಕ ದಾಳಿ' ಎಂದು ದೂರಿದ್ದರು. ಹಾಗೆಯೇ, ದಾಳಿಯಿಂದಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಗ್ರರಿಬ್ಬರನ್ನೂ ಹೊಡೆದುರುಳಿಸಿದ್ದೇವೆ ಎಂದು ತಿಳಿಸಿದ್ದರು.