ನವದೆಹಲಿ: ಭಾರತವು ಶುಕ್ರವಾರ ಲೆಬನಾನ್‌ಗೆ ಔಷಧಗಳು ಸೇರಿದಂತೆ 33 ಟನ್‌ಗಳಷ್ಟು ಮಾನವೀಯ ನೆರವು ಸಾಮಗ್ರಿಗಳನ್ನು ಕಳುಹಿಸಲು ನಿರ್ಧರಿಸಿದೆ.
'ಒಟ್ಟು 33 ಟನ್‌ಗಳಷ್ಟು ನೆರವು ಸಾಮಗ್ರಿ ಕಳುಹಿಸಲಾಗುತ್ತದೆ. ಮೊದಲ ಕಂತಿನಲ್ಲಿ 11 ಟನ್ ವೈದ್ಯಕೀಯ ನೆರವು ಸಾಮಗ್ರಿಗಳನ್ನು ಶುಕ್ರವಾರ ರವಾನಿಸಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.