ನವದೆಹಲಿ: ನಾಲ್ಕು ವರ್ಷ ಹಿಂದೆ 35 ರೂಪಾಯಿ ಇದ್ದ ಈ ಮಲ್ಟಿಬ್ಯಾಗರ್ ಕಂಪನಿಯ ಷೇರು ಮೌಲ್ಯ ಈಗ 1,800 ರೂಪಾಯಿ ಆಸುಪಾಸಿನಲ್ಲಿದೆ. ಷೇರು ಮೌಲ್ಯದಲ್ಲಿ ಶೇಕಡ 5,062 ರಷ್ಟು ಏರಿಕೆ ದಾಖಲಾಗಿದ್ದು, ಷೇರುದಾರರಿಗೆ ಭರ್ಜರಿ ಲಾಭ ಮಾಡಿಕೊಟ್ಟಿದೆ. ಇದು ಲೋಟಸ್ ಚಾಕೊಲೇಟ್ ಕಂಪನಿಯ ಷೇರು.
ರಿಲಯನ್ಸ್ ಹೂಡಿಕೆಯ ಕಂಪನಿ ಲೋಟಸ್ ಚಾಕೊಲೇಟ್ ಮತ್ತು ಷೇರುಗಳ ಸ್ಥಿತಿಗತಿ
ರಿಲಯನ್ಸ್ ರೀಟೇಲ್ ವೆಂಚರ್ಸ್ (ಆರ್‌ಆರ್‌ವಿಎಲ್) ನ ಎಫ್‌ಎಂಸಿಜಿ ಶಾಖೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ (ಆರ್‌ಸಿಪಿಎಲ್) 2023ರ ಮಾರ್ಚ್ ತಿಂಗಳಲ್ಲಿ ಲೋಟಸ್ ಚಾಕೊಲೇಟ್ ಕಂಪನಿಯಲ್ಲಿ ಒಟ್ಟು 74 ಕೋಟಿ ರೂಪಾಯಿಗೆ ಶೇಕಡ 51 ಪಾಲನ್ನು ಸ್ವಾಧೀನಪಡಿಸಿಕೊಂಡಿತ್ತು.
ಲೋಟಸ್ ಚಾಕೊಲೇಟ್ ಕಂಪನಿಯ ಷೇರುಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 480 ಮತ್ತು ಕಳೆದ ಐದು ವರ್ಷಗಳಲ್ಲಿ ಶೇ 10,784 ಆದಾಯವನ್ನು ನೀಡಿವೆ. ಐದು ವರ್ಷಗಳಲ್ಲಿ ಈ ಷೇರು 16 ರೂಪಾಯಿಯಿಂದ ಈಗಿನ ಬೆಲೆಗೆ ಅಂದರೆ 1,800 ರೂಪಾಯಿಗೆ ಏರಿಕೆಯಾಗಿದೆ. ಇದರ ಗರಿಷ್ಠ ರಿಟರ್ನ್ಸ್ 5400 ಪ್ರತಿಶತ. 2023ರ ಅಕ್ಟೋಬರ್ 3 ರಂದು ಕಂಪನಿಯ ಷೇರುಗಳ ಬೆಲೆ ಕೇವಲ 2 ರೂಪಾಯಿ ಇತ್ತು. ಅಂದರೆ ಅಂದಿನಿಂದ ಈ ಸ್ಟಾಕ್ ಶೇಕಡಾ 90250 ರಷ್ಟು ಏರಿದೆ. ಅಂದರೆ, ಹೂಡಿಕೆದಾರರು ಸುಮಾರು 21 ವರ್ಷಗಳ ಹಿಂದೆ ಈ ಷೇರಿನಲ್ಲಿ 10,000 ರೂ.ಗಳನ್ನು ಹೂಡಿಕೆ ಮಾಡಿದ್ದರೆ, ಪ್ರಸ್ತುತ ಅದರ ಮೌಲ್ಯ 90 ಲಕ್ಷ ರೂಪಾಯಿಗಿಂತ ಹೆಚ್ಚಿರುತ್ತಿತ್ತು.
ಕಂಪನಿಗಳ ವಿವರ
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ಆರ್‌ಆರ್‌ವಿಎಲ್, ರಿಲಯನ್ಸ್ ಗುಂಪಿನ ಎಲ್ಲ ಚಿಲ್ಲರೆ ವ್ಯಾಪಾರಗಳನ್ನು ಗಮನಿಸುವ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. ಲೋಟಸ್ ಚಾಕೊಲೇಟ್ಸ್ ಕಂಪನಿಯು ಭಾರತದ ಅತ್ಯುತ್ತಮ ಚಾಕೊಲೇಟ್, ಕೋಕೋ ಉತ್ಪನ್ನಗಳ ಪ್ರಮುಖ ತಯಾರಕರಲ್ಲಿ ಒಂದಾಗಿದೆ. ಇದರ ಉತ್ಪನ್ನಗಳನ್ನು ಸ್ಥಳೀಯ ಬೇಕರಿಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಗಳವರೆಗೆ ದೇಶಾದ್ಯಂತ ಚಾಕೊಲೇಟ್ ತಯಾರಕರು ಮತ್ತು ಚಾಕೊಲೇಟ್ ಬಳಕೆದಾರರಿಗೆ ಸರಬರಾಜಾಗುತ್ತಿದೆ. ಚಾಕೊಲೇಟ್ ಮತ್ತು ಮಿಠಾಯಿ ಉದ್ಯಮಗಳ ವಹಿವಾಟು 25,000 ಕೋಟಿ ರೂಪಾಯಿಯನ್ನು ಮೀರುತ್ತದೆ ಎಂದು ಅಂದಾಜಿಸಲಾಗಿದೆ, ಚಾಕೊಲೇಟ್ ಮಾರುಕಟ್ಟೆಯ ಸುಮಾರು ಮೂರನೇ ಎರಡರಷ್ಟು ಮತ್ತು ಮಿಠಾಯಿಗಳ ಖಾತೆಯು ಮೂರನೇ ಒಂದು ಭಾಗದಷ್ಟು ವಹಿವಾಟನ್ನು ಈ ಕಂಪನಿ ನಡೆಸುತ್ತಿದೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಉದ್ಯಮವು 35,000 ಕೋಟಿ ರೂಪಾಯಿಗಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. ಇದು ಶೇಕಡಾ 10 ರ ಸಿಎಜಿಆರ್ ಬೆಳವಣಿಗೆಯನ್ನು ತೋರಿಸುತ್ತಿರುವುದು ಬೆಳವಣಿಗೆ ಹಾದಿಗೆ ಭರವಸೆಯನ್ನು ತುಂಬಿದೆ. ಚಾಕೊಲೇಟ್ ಮಾರುಕಟ್ಟೆ ಮೊಂಡೆಲೆಜ್, ನೆಸ್ಲೆ, ಫೆರೆರೊ ಮತ್ತು ಮಾರ್ಸ್‌ನಂತಹ ಅಂತಾರಾಷ್ಟ್ರೀಯ ಕಂಪನಿಗಳ ನಿಯಂತ್ರಣದಲ್ಲಿದೆ. ಇದು ಒಟ್ಟು ಶೇಕಡ 85 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ. ಆದಾಗ್ಯೂ, ಚಾಕೊಲೇಟ್ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳು ಇತ್ತೀಚೆಗೆ ಜನಪ್ರಿಯತೆಯನ್ನು ಗಳಿಸಲು ಪ್ರಾರಂಭಿಸಿದ್ದು, ಈ ಪೈಕಿ ಅಮುಲ್ ಅತಿದೊಡ್ಡ ದೇಶೀಯ ಕಂಪನಿಯಾಗಿದೆ.