ಬಿ.ಎಸ್.ಎನ್.ಎಲ್. ಈಗಾಗಲೇ 35,000 ಕ್ಕೂ ಹೆಚ್ಚು 4ಜಿ ಟವರ್‍ಗಳನ್ನು ಸ್ಥಾಪಿಸಿದೆ ಮತ್ತು ಮುಂದಿನ ವರ್ಷ ಜೂನ್ ವೇಳೆಗೆ 100,000 ಟವರ್‍ಗಳನ್ನು ಸ್ಥಾಪಿಸಲಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಕಂಪನಿಯು ತನ್ನ 4ಜಿ ನೆಟ್‍ವರ್ಕ್ ಅನ್ನು ಅರುಣಾಚಲ ಪ್ರದೇಶದ ಮಲಪ್ಪುದಿಂದ ಲಡಾಖ್‍ನ ಪೋಬ್ರಾಂಗ್‍ವರೆಗೆ 14,500 ಅಡಿ ಎತ್ತರದಲ್ಲಿ ವಿಸ್ತರಿಸಿದೆ.
ಸಂವಹನ ಸಚಿವಾಲಯವು ಮೊದಲ ಬಾರಿಗೆ ಪೋನ್ ರಿಂಗಣಿಸಿದ ಭಾರತದ ಮೊದಲ ಗ್ರಾಮವಾದ ನಬಿಯಲ್ಲಿ ಮೊಬೈಲ್ ನೆಟ್‍ವರ್ಕ್ ಆಗಮನವನ್ನು ಘೋಷಿಸುವ ವೀಡಿಯೊವನ್ನು ಸಹ ಹಂಚಿಕೊಂಡಿದೆ. ಈ ಹಿಂದೆ ಉತ್ತರಾಖಂಡದ ಈ ಗ್ರಾಮಕ್ಕೆ ಯಾವುದೇ ದೂರಸಂಪರ್ಕ ಸೌಲಭ್ಯವಿರಲಿಲ್ಲ. ಭಾರತದಲ್ಲಿ ಮೊಬೈಲ್ ನೆಟ್‍ವರ್ಕ್ ಈಗ ದೇಶ ಮತ್ತು ಪ್ರದೇಶದ 98 ಪ್ರತಿಶತವನ್ನು ಒಳಗೊಂಡಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅನ್ನು ಪುನಶ್ಚೇತನಗೊಳಿಸಲು 6,000 ಕೋಟಿ ರೂ.ಮೀಸಲಿಟ್ಟು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇತ್ತೀಚೆಗೆ, ಜಿಯೊ, ಏರ್ ಟೆಲ್ ಮತ್ತು ವಿ ಸೇರಿದಂತೆ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‍ಗಳು ಮೊಬೈಲ್ ಸುಂಕಗಳನ್ನು 15 ಪ್ರತಿಶತದಷ್ಟು ಹೆಚ್ಚಿಸಿವೆ. ಇದರ ಪರಿಣಾಮವಾಗಿ, ಅನೇಕ ಟೆಲಿಕಾಂ ಚಂದಾದಾರರು ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಗೆ ಬದಲಾಯಿಸಿದರು. ಬಿ.ಎಸ್.ಎನ್.ಎಲ್. ಈ ವರ್ಷದ ಜುಲೈನಲ್ಲಿ 29.4 ಲಕ್ಷ ಹೊಸ ಚಂದಾದಾರರನ್ನು ಪಡೆದುಕೊಂಡಿದೆ.