ಕಾಸರಗೋಡು: ನೀಲೇಶ್ವರದ ಬಂಗಳಂನಲ್ಲಿ ಶಿವಗಿರಿ ಮಠದ ಅಧೀನದಲ್ಲಿ ಕೋಟಪುನ್ನದಲ್ಲಿ ನಿಮಿಸಲಾಗಿರುವ ಶ್ರೀನಾರಾಯಣ ಗುರು ಮಠದ ಲೋಕಾರ್ಪಣಾ ಸಮಾರಂಭ ನ.3ರಂದು ನಡೆಯಲಿದೆ. ಪರಿಶಿಷ್ಟ ಜಾತಿ-ಹಿಂದುಳಿದ ವರ್ಗ ಕಲ್ಯಾಣ ಖಾತೆ ಸಚಿವ ಒ.ಆರ್ ಕೇಳು ಸಮಾರಂಭ ಉದ್ಘಾಟಿಸುವರು. ಶಿವಗಿರಿ ಧರ್ಮ ಸಂಘ ಟ್ರಸ್ಟ್‍ನ ಅಧ್ಯಕ್ಷ ಸ್ವಾಮಿ ಸಚ್ಚಿದಾನಂದ ಶ್ರೀಮಠದ ಲೋಕಾರ್ಪಣೆ ನೆರವೇರಿಸುವರು. ಧರ್ಮ ಸಂಗಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಭಂಗಾನಂದ ಸ್ವಾಮಿ ಪ್ರಾರ್ಥನಾ ಮಂದಿರ ಉದ್ಘಾಟಿಸುವರು. ಶಾಸಕ ಇ.ಚಂದ್ರಶೇಖರನ್ ದಿಕ್ಸೂಚಿ ಭಾಷಣ ಮಾಡುವರು. ತ್ರಿಕರಿಪುರ ಶಾಸಕ ಎಂ ರಾಜಗೋಪಾಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ನಡೆಯಲಿರುವ ಸರ್ವಧರ್ಮ ಸಭೆಯನ್ನು ಸಂಸದ ರಾಜಮೋಹನ್ ಉಣ್ಣಿಥಾನ್ ಉದ್ಘಾಟಿಸುವರು. ಸನ್ಯಾಸಿ ಸಂಗಮವೂ ನಡೆಯಲಿದೆ.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಉದ್ಘಾಟಿಸಿದರು. ಶಿವಗಿರಿ ಮಠದ ಸ್ವಾಮಿ ಸುರೇಶ್ವರಾನಂದ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ಪ್ರೇಮಾನಂದ ಆಶೀರ್ವಚನ ನೀಡಿದರು. ಪಯ್ಯನ್ನೂರು ಸ್ವಾಮಿ ಆನಂದ ತೀರ್ಥ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವಸುಮಿತ್ರನ್ ಎಂಜಿ, ಹೊಜದುರ್ಗ ಎಸ್.ಎನ್‍ಡಿಪಿ ಯೂನಿಯನ್ ಕಾರ್ಯದರ್ಶಿ ಪಿ. ವಿ.ವೇಣುಗೋಪಾಲನ್, ಯೋಗಂ ನಿದೇಶಕ ಸಿ. ನಾರಾಯಣನ್, ಕೆ. ಪ್ರಭಾಕರನ್, ಗುರುಧರ್ಮ ಪ್ರಚಾರ ಸಭಾ ಸಂಯೋಜಕ ಸುಧೀಂದ್ರ ಬಾಬು, ಕಾಸರಗೋಡು ಜಿಲ್ಲಾಧ್ಯಕ್ಷ ವಕೀಲ ಕೆ.ಸಿ. ಶಶೀಂದ್ರನ್, ಜಿಲ್ಲಾ ಸಂಯೋಜಕ ಉದಿನೂರು ಸುಕುಮಾರನ್, ಪ್ರಸಾದ್ ಶಾಂತಿ ಮೊದಲದವರು ಉಪಸ್ಥಿತರಿದ್ದರು. ಜಿಡಿಪಿಎಸ್ ಜಿಲ್ಲಾ ಸಂಚಾಲಕ ವಿನೋದ ಆಟ್ಟಿಪ್ಪಿಲ್ ಸ್ವಾಗತಿಸಿದರು. ಮಧು ಬಂಗಳಂ ವಂದಿಸಿದರು.