ಮುಂಬೈ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ(helicopter crashed) ಇಬ್ಬರು ಪೈಲಟ್‌ಗಳು ಮತ್ತು ಎಂಜಿನಿಯರ್ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಹೆರಿಟೇಜ್ ಏವಿಯೇಷನ್‌ಗೆ ಸೇರಿದ ಅಗಸ್ಟಾ-109 ಹೆಲಿಕಾಪ್ಟರ್ ಇದಾಗಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಹೆಲಿಕಾಪ್ಟರ್ ಅನ್ನು ತಮ್ಮ ಪಕ್ಷವು ಬಾಡಿಗೆಗೆ ಪಡೆದಿತ್ತು. ಮಂಗಳವಾರ(ಅ1) ಅದರಲ್ಲಿ ಬೀಡ್ ಜಿಲ್ಲೆಯ ಪರ್ಲಿಗೆ ಪ್ರಯಾಣಿಸಿದ್ದೆ. ಬುಧವಾರ(ಅ.2)ರಂದು ಇದರಲ್ಲಿಯೇ ಮುಂಬೈನಿಂದ ರಾಯಗಡಕ್ಕೆ ಪ್ರಯಾಣಿಸಬೇಕಿತ್ತು ಎಂದು ಎನ್‌ಸಿಪಿ ಮಹಾರಾಷ್ಟ್ರ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಸುನೀಲ್ ತಟ್ಕರೆ ತಿಳಿಸಿದ್ದಾರೆ.
ಮತ್ತೊಂದೆಡೆ, ತಾಂತ್ರಿಕ ಸಮಸ್ಯೆಯಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಬುಧವಾರ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನೆರೆಯ ದರ್ಭಾಂಗಾ ಪ್ರದೇಶದಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ ಪದಾರ್ಥಗಳನ್ನು ಇಳಿಸಿ ಹಿಂದಿರುಗುವಾಗ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಸುಬ್ರತ್ ಕುಮಾರ್ ಸೇನ್ ತಿಳಿಸಿದ್ದಾರೆ.