HEALTH TIPS

ದೀಪಾವಳಿಗೆ ಕೇಂದ್ರದ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ 3ರಷ್ಟು ಹೆಚ್ಚಳ

           ವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಶೇ 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಪ್ರಸ್ತಾವನೆಗೆ ಕೇಂದ್ರದ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

              ಈ ವರ್ಷದ ಜುಲೈ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ.

           ಇದಕ್ಕಾಗಿ ಕೇಂದ್ರಕ್ಕೆ ₹ 9,448 ಕೋಟಿ ಹೊರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮೂಲ ವೇತನದ ಶೇ 53ರಷ್ಟಾಗಿದೆ. ಹಣದುಬ್ಬರ ಹೆಚ್ಚಳದ ನಡುವೆ ತುಟ್ಟಿ ಭತ್ಯೆ ಹೆಚ್ಚಳವು ಕೇಂದ್ರದ ನೌಕರರ ಹೊರೆಯನ್ನು ತಗ್ಗಿಸಲಿದೆ ಎಂದು ವರದಿ ತಿಳಿಸಿದೆ.

                ಉದಾಹರಣೆಗೆ ಮಾಸಿಕ ₹40,000 ಮೂಲ ವೇತನ ಪಡೆಯುತ್ತಿರುವ ನೌಕರನಿಗೆ ಶೇ 3ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ ಮಾಸಿಕ ₹1,200 ಹೆಚ್ಚುವರಿಯಾಗಿ ಸಿಗಲಿದೆ. ಈ ಮೂಲಕ ಒಟ್ಟು ತುಟ್ಟಿ ಭತ್ಯೆ ₹20,000ದಿಂದ ₹21,200ಕ್ಕೆ ಹೆಚ್ಚಳವಾಗಲಿದೆ. ಪಿಂಚಣಿದಾರರಿಗೂ ಇದರ ಅನುಕೂಲ ಸಿಗಲಿದೆ.

ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೌಕರರನ್ನು ಬೆಂಬಲಿಸಲು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (ಎಐಸಿಪಿಐ) ಆಧಾರದ ಮೇಲೆ ತುಟ್ಟಿ ಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.  ಈ ವರ್ಷದ ಮಾರ್ಚ್ ತಿಂಗಳಲ್ಲಿ ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries